ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು ಆಯ್ಕೆ

ಸರ್ಕಾರಿ ಪ್ರೌಢಶಾಲೆ ಅಜ್ಜಾವರ ಇಲ್ಲಿಯ ಇಬ್ಬರು ವಿದ್ಯಾರ್ಥಿಗಳು ಭಾರತ ಸರ್ಕಾರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಆಯೋಜಿಸಿರುವ ಪ್ರತಿಷ್ಠಿತ “INSPIRE Award -MANAK” ಗೆ ಆಯ್ಕೆಯಾಗಿರುತ್ತಾರೆ. ಈ ಯೋಜನೆಯಡಿ ಮಂಡೆಕೊಲು ಮನೆಯ ಜನಾರ್ಧನ ಮತ್ತು ಧರ್ಮಾವತಿ ದಂಪತಿ ಪುತ್ರಿ 9ನೇ ತರಗತಿಯ ಮೋಕ್ಷಿತಾ ಎಂ.ಜೆ ಹಾಗೂ ಅಜ್ಜಾವರ ಗ್ರಾಮದ ನಾರಾಲು ಮನೆಯ ಪರಮೇಶ್ವರ ಮತ್ತು ರಜನಿ ದಂಪತಿ ಪುತ್ರ 9ನೇ ತರಗತಿಯ ಗುರುದೀಪ್.ಎನ್ ಅವರು ತಮ್ಮ ವೈಜ್ಞಾನಿಕ ಆಲೋಚನೆಗಳು ಮತ್ತು ನವೀನ ಆವಿಷ್ಕಾರ ಕಲ್ಪನೆಗಳನ್ನು ಪ್ರಸ್ತುತಪಡಿಸಲು ತಲಾ ರೂ.10,000 ನಗದು ಬಹುಮಾನವನ್ನು ಪಡೆದಿರುತ್ತಾರೆ. ವಿಜ್ಞಾನ ಶಿಕ್ಷಕ ಚಂದ್ರಶೇಖರ ಭಟ್.ಎ ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಮಾದರಿಗಳ ಪ್ರಸ್ತಾವನೆಯನ್ನು ಇಲಾಖಾ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading