ಹರಿಹರ ಪಳ್ಳತ್ತಡ್ಕ : ಕೃಷಿಕರಿಗೆ ಏಣಿ ವಿತರಣಾ ಕಾರ್ಯಕ್ರಮ ಹಾಗೂ ವಿವಿಧ ಕೃಷಿ ಬೆಳೆಗಳ ಬಗ್ಗೆ ಮಾಹಿತಿ ಕಾರ್ಯಕ್ರಮ

ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿಯಮಿತ ವಿಟ್ಲ, 3ಎಫ್ ಆಯಿಲ್ ಪಾಮ್ ಪ್ರೈವೇಟ್ ಲಿಮಿಟೆಡ್ ಹಾಗೂ ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇವುಗಳ ಸಹಯೋಗದೊಂದಿಗೆ ಮಾ.20ರಂದು ಹರಿಹರ ಪಳ್ಳತ್ತಡ್ಕದ ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ನೀರಾ ಅಮೃತ ಯೋಜನೆ 2026-27 ಇದರ ಅಡಿಯಲ್ಲಿ ಕೃಷಿಕರಿಗೆ “ಏಣಿ ವಿತರಣಾ ಕಾರ್ಯಕ್ರಮ” ಹಾಗೂ “ವಿವಿಧ ಕೃಷಿ ಬೆಳೆಗಳ ಬಗ್ಗೆ ಮಾಹಿತಿ ಕಾರ್ಯಕ್ರಮ”ವು ನಡೆಯಿತು. ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಡಾ. ಸೋಮಶೇಖರ್ ಕಟ್ಟೆಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಸಖಿ ಮೋಹಿನಿ ವಿಶ್ವನಾಥ್ ಸಂಪಾಜೆ ಇವರು ರೇಷ್ಮೆ ಕೃಷಿ, ಮಲ್ಲಿಗೆ ಕೃಷಿ, ಗೇರು ಬೆಳೆಗಳ ಮೌಲ್ಯವರ್ಧನೆ, ಪ್ರಯೋಜನಗಳು ಹಾಗೂ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯಿಂದ ಕೃಷಿಕರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಸುಳ್ಯ ಕ್ಲಸ್ಟರ್ ಸೂಪರ್‌ವೈಸರ್ ರವಿಶಂಕರ್ ತಾಳೆ ಕೃಷಿಯ ಬಗ್ಗೆ ಮಾಹಿತಿ ನೀಡಿದರು. ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾದ ಗಣೇಶ್ ಭಟ್ ಇಡ್ಯಡ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೆಳ್ಯಪ್ಪ ಗೌಡ ಮಣಿಯಾನಮನೆ, ಸುಧೀರ್ ಕಟ್ಟೆಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹರಿಹರ ಪಳ್ಳತ್ತಡ್ಕ ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಜಗದೀಶ್ ಪಡ್ಪು, ಸಂಘದ ನಿರ್ದೇಶಕರಾದ ರೇಗನ್ ಶೆಟ್ಯಡ್ಕ, ಹಿಮ್ಮತ್.ಕೆ.ಸಿ, ಗೋಪಾಲಕೃಷ್ಣ ಚಾಂತಾಳ ಹಾಗೂ ಸಂಘದ ಮಾಜಿ ನಿರ್ದೇಶಕರುಗಳು, ಗ್ರಾಮದ ಕೃಷಿಕರು ಹಾಗೂ ಸಂಜೀವಿನಿ ಒಕ್ಕೂಟದ ವೇದಾವತಿ, ದಿವ್ಯ ಹಾಗೂ ಸವಿತಾ ಉಪಸ್ಥಿತರಿದ್ದರು. ಒಟ್ಟು ಪ್ರಥಮ ಹಂತದಲ್ಲಿ ಅರ್ಜಿ ಸಲ್ಲಿಸಿದ 112 ಫಲಾನುಭವಿಗಳಿಗೆ ಏಣಿ ವಿತರಣೆ ಮಾಡಲಾಯಿತು. ಸೋಮಶೇಖರ್ ಕಟ್ಟೆಮನೆ ಸ್ವಾಗತಿಸಿ ಗಣೇಶ್ ಭಟ್ ಇಡ್ಯಡ್ಕ ಧನ್ಯವಾದ ಸಮರ್ಪಿಸಿದರು. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading