ಅಜ್ಜಾವರ : ಹಲ್ಲಿನ ಸ್ವಚ್ಛತೆ ಅರಿವು ಮತ್ತು ತಪಾಸಣಾ ಕಾರ್ಯಕ್ರಮ

ಚೈತ್ರ ಯುವತಿ ಮಂಡಲ ಅಜ್ಜಾವರ, ಪ್ರತಾಪ ಯುವಕ ಮಂಡಲ ಅಜ್ಜಾವರ, ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಜ್ಜಾವರ ಇವುಗಳ ಸಹಯೋಗದಲ್ಲಿ ಪಂಚಸಪ್ತತಿ ಸ್ವಚ್ಛತಾ ಅಭಿಯಾನದ ಅಂಗವಾಗಿ ಹಲ್ಲಿನ ಸ್ವಚ್ಛತೆ ಅರಿವು ಮತ್ತು ತಪಾಸಣಾ ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಜ್ಜಾವರ ಇಲ್ಲಿ ನಡೆಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀಮತಿ ಪುಷ್ಪ ಕರ್ಲಪ್ಪಾಡಿ ವಹಿಸಿದ್ದರು.ಕೆ.ವಿ.ಜಿ ಸಮುದಾಯ ದಂತ ಆರೋಗ್ಯ ವಿಭಾಗದ ಡಾ.ಆ್ಯನಾ ನಿರೀಕ್ಷಾ ಅವರು ಹಲ್ಲಿನ ಸ್ವಚ್ಛತೆ ಅರಿವು ಬಗ್ಗೆ ಮಾಹಿತಿಯನ್ನು ನೀಡಿದರು. ಕೆ.ವಿ.ಜಿ ದಂತ ಮಹಾವಿದ್ಯಾಲಯ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಜಯಂತ್ ತಳೂರು ಅವರು ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು. ಪ್ರತಾಪ ಯುವಕ ಮಂಡಲ ಅಧ್ಯಕ್ಷ ಗುರುರಾಜ್ ಅಜ್ಜಾವರ, ಮುಖ್ಯ್ಯೋಪಾಧ್ಯಯಾರಾದ ಶ್ರೀಮತಿ ತೇಜಾವತಿ, ಯುವಕ ಮಂಡಲ ಕಾರ್ಯದರ್ಶಿ ನವೀನ್ ಕೂಕ್ಲುಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕು. ದಿಶಾ ಮತ್ತು ತಂಡ ಪ್ರಾರ್ಥಿಸಿ, ಗುರುರಾಜ್ ಸ್ವಾಗತಿಸಿ, ನವೀನ್ ವಂದಿಸಿದರು.
ಶ್ರೀಮತಿ ಶಶ್ಮಿ ಭಟ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಶ್ರೀಮತಿ ದಿವ್ಯ ಪಡ್ಡಂಬೈಲು,  ಸೀತಾರಾಮ ಕರ್ಲಪ್ಪಾಡಿ, ಸೂರ್ಯ ಕುಮಾರ್, ಗಿರಿಧರ ನಾರಲು, ರವಿ ನಾರಲು, ಮೋಹಿನಿ ನಾರಾಯಣ, ಗ್ರೀಷ್ಮ ಕರ್ಲಪ್ಪಾಡಿ, ಶಾಲಾ ಶಿಕ್ಷಕರ ವೃಂದ, ಅಜ್ಜಾವರ ಅಂಗನವಾಡಿ ಕೇಂದ್ರ ಶಿಕ್ಷಕಿ  ಹಾಗೂ ಪುಟಾಣಿ ಮಕ್ಕಳು ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading