ಮೈಸೂರಿನಲ್ಲಿ ನಡೆದ ಅಪಘಾತ – ಸುಳ್ಯದ ಯುವಕ ಮೃತ್ಯು

ಮೈಸೂರಿನಿಂದ ಬೆಂಗಳೂರಿಗೆ ಬೈಕ್ ನಲ್ಲಿ ತೆರಳುತ್ತಿದ್ದ ಸುಳ್ಯದ ಯುವಕನೋರ್ವ ಮೈಸೂರು ಸಮೀಪದ ಬನ್ನೂರು ಎಂಬಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಘಟನೆ ಡಿ.12 ರಂದು ಮುಂಜಾನೆ ನಡೆದಿದೆ.

. . . . . . . . .

ಉಬರಡ್ಕ ಮಿತ್ತೂರು ಗ್ರಾಮದ ಕಂದಡ್ಕ ಕಲ್ಟಾರ್ ನಿವಾಸಿ ಶೇಷಪ್ಪ ನಾಯ್ಕರವರ ಪುತ್ರ ದೀಕ್ಷಿತ್ (25) ಮೃತ ಸುರ್ದೈವಿ. ಈತ ಬೆಂಗಳೂರಿನ ಜ್ಯುವೆಲ್ಲರಿ ಶಾಪ್ ನಲ್ಲಿ ಉದ್ಯೋಗಿಯಾಗಿದ್ದರು. ದೀಕ್ಚಿತ್ ಚಲಾಯಿಸುತ್ತಿದ್ದ ಹಿಮಾಲಯನ್ ಬೈಕ್ ಗೆ ಮೈಸೂರು ಸಮೀಪದ ಬನ್ನೂರು ಎಂಬಲ್ಲಿ ಬೇರೆ ವಾಹನ ಢಿಕ್ಕಿಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಅಪಘಾತದಿಂದ ಗಂಭೀರ ಗಾಯಗೊಂಡು ಬಿದ್ದಿದ್ದ ದೀಕ್ಷಿತ್ ರನ್ನು ನೋಡಿದವರು ಆಸ್ಪತ್ರೆಗೆ ಸೇರಿಸಿದರಾದರೂ ಆ ವೇಳೆ ಮೃತಪಟ್ಟಿದರೆನ್ನಲಾಗಿದೆ. ಮೃತರು ತಂದೆ,ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading