ಸೈಂಟ್ ಜೋಸೆಫ್ ಶಾಲಾ ಬಾಲಕರ ಫುಟ್ಬಾಲ್ ತಂಡ  ಜಿಲ್ಲಾ ಮಟ್ಟಕ್ಕೆ ಆಯ್ಕೆ

ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ  ಅಡ್ಪಂಗಾಯದಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ 14ರ ವಯೋಮಾನದ ಬಾಲಕರ   ಫುಟ್ಬಾಲ್ ಪಂದ್ಯಾಟದಲ್ಲಿ  ಸುಳ್ಯದ ಸೈಂಟ್ ಜೋಸೆಫ್  ಶಾಲಾ ಬಾಲಕರ ತಂಡವು ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡಿದೆ. 
ಅಹಮದ್ ಅಬ್ರರ್, ಮಹಮ್ಮದ್ ಫಾಝಿಲ್, ಮಹಮ್ಮದ್ ಫರ್ಹಾನ್,  ಮೋಯಿದೀನ್ ಹಾಫಿಲ್, ಅಯಾಜ್, ಮಹಮ್ಮದ್ ರೌ ಶಾನ್ 7ನೇ ತರಗತಿ, ಮಹಮ್ಮದ್ ಅಫ್ರಾಜ್, ಮಹಮ್ಮದ್ ರಾಹಿಲ್, ಮಹಮ್ಮದ್ ಮುರ್ಶಿದ್, ಮಹಮ್ಮದ್ ಸುಹೈಲ್, ಮಹಮ್ಮದ್ ಮುಸ್ತಫಾ 8ನೇ ತರಗತಿ ಇವರು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಅಹಮದ್ ಅಬ್ರರ್ ಉತ್ತಮ ಗೋಲ್ ಕೀಪರ್, ಮಹಮ್ಮದ್ ಫರಹಾನ್ ಉತ್ತಮ ಸ್ಟ್ರೈಕರ್ ವೈಯಕ್ತಿಕ ಪ್ರಶಸ್ತಿಯನ್ನು ಗಳಿಸಿದರು .
ಶಾಲಾ ಜೊತೆ ಕಾರ್ಯದರ್ಶಿ ರೆ. ಫಾ. ಓಲ್ವಿನ್ ಡಿ’ಕುನ್ಹ , ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮೇರಿ ಸ್ಟೆಲ್ಲಾರ ಮಾರ್ಗದರ್ಶನದಲ್ಲಿ, ದೈಹಿಕ ಶಿಕ್ಷಣ ಶಿಕ್ಷಕರಾದ ಕೊರಗಪ್ಪ  ಬೆಳ್ಳಾರೆ ಹಾಗೂ ಪುಷ್ಪವೇಣಿ  ಹುದೇರಿ ತರಬೇತಿ ನೀಡಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading