ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕೆಂದು ಬೇಡಿಕೆ ಈಡೇರಿಸಿದ ಕೊರಗಜ್ಜ – ಮೇ.17ರಂದು ಕೊರಂಬಡ್ಕ ಕೊರಗಜ್ಜ ದೈವಸ್ಥಾನದಲ್ಲಿ ನೇಮೋತ್ಸವ – ಆಮಂತ್ರಣ ಬಿಡುಗಡೆ

. . . . . . . . .

ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ದೇಶದ ಚುಕ್ಕಾಣಿ ಹಿಡಿಯಬೇಕೆಂದು ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜಯನಗರ ಬೂತ್ ಸಮಿತಿಯವರು ಕೊರಂಬಡ್ಕ ಕೊರಗಜ್ಜ ಸಾನಿಧ್ಯದಲ್ಲಿ ಹರಕೆ ಹೇಳಿಕೊಂಡಿದ್ದು, ಆ ಪ್ರಕಾರ ಮೇ.17ರಂದು ಕೊರಗಜ್ಜ ದೈವದ ನೇಮೋತ್ಸವ ಕಾರ್ಯ ನಡೆಯಲಿದ್ದು, ಆಮಂತ್ರಣ ಪತ್ರ ಬಿಡುಗಡೆ ಮೇ.3ರಂದು ಕೊರಂಬಡ್ಕ ದೈವಸ್ಥಾನದ ವಠಾರದಲ್ಲಿ ನಡೆಯಿತು.

. . . . . . .

ಕೊರಂಬಡ್ಕ ನಾಗಬ್ರಹ್ಮ ಆದಿಮೊಗೇರ್ಕಳ ದೈವಸ್ಥಾನ,ಗುಳಿಗ ಹಾಗೂ ಕೊರಗಜ್ಜ ದೈವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ಬಳಿಕ ಮಾಜಿ ಸಚಿವ ಎಸ್.ಅಂಗಾರರು ಹಾಗೂ ಬಿಜೆಪಿ ಮಂಡಲಾಧ್ಯಕ್ಷ ವೆಂಕಟ್ ವಳಲಂಬೆಯವರು ಆಮಂತ್ರಣ ಬಿಡುಗಡೆಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಾರ್ಟಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರು ಭಾಗವಹಿಸಲಿದ್ದಾರೆ.

ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ದೈವಸ್ಥಾನದ ಆಡಳಿತ ಕಾರ್ಯ ಸೇವಾ ಸಮಿತಿ ಅಧ್ಯಕ್ಷ ಕೇಶವ ಮಾಸ್ತ‌ರ್ ಹೊಸಗದ್ದೆ, ಆರ್ಥಿಕ ಸಮಿತಿ ಪ್ರಮುಖರಾದ ಅಶೋಕ್‌ ಪ್ರಭು, ಉದ್ಯಮಿ ಕಸ್ತೂರಿ ಶಂಕರ್ ಹಳೆಗೇಟು, ಹಳೆಗೇಟು ಶಕ್ತಿ ಕೇಂದ್ರ ಪ್ರಮುಖರಾದ ರಮೇಶ್ ಇರಂತಮಜಲು, ಬೂತ್ ಸಮಿತಿ ಅಧ್ಯಕ್ಷ ರಂಜಿತ್ ಕುಮಾ‌ರ್ ಕೆ.ಆರ್., ಬಿಜೆಪಿ ನಗರ ಕಾರ್ಯದರ್ಶಿ ನಾರಾಯಣ ಶಾಂತಿನಗರ ವೇದಿಕೆಯಲ್ಲಿದ್ದರು. ನಗರ ಪಂಚಾಯತ್ ಸದಸ್ಯರು, ಪಕ್ಷದ ಹಿರಿಯರು, ಪ್ರಮುಖರು, ದೈವಸ್ಥಾನ ಸಮಿತಿಯವರು ಈ ಸಂದರ್ಭದಲ್ಲಿ ಇದ್ದರು.

ನೇಮೋತ್ಸವ ನಿರ್ವಹಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಜಿ.ಜಗನ್ನಾಥ ಜಯನಗರ ವಂದಿಸಿದರು.

ನಗರ ಬಿಜೆಪಿ ಅಧ್ಯಕ್ಷ ಎ.ಟಿ. ಕುಸುಮಾಧರ ಕಾರ್ಯಕ್ರಮ ನಿರ್ವಹಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading