ಅಯ್ಯನಕಟ್ಟೆ ನಮ್ಮ ಆರೋಗ್ಯಧಾಮ ಮಲ್ಟಿಸ್ಪೆಷಾಲಿಟಿ ಮೆಡಿಕಲ್ ಸೆಂಟರ್ ನಲ್ಲಿ ಉಚಿತ ವಿಟಮಿನ್ ಡಿ ಹಾಗೂ ಜಂತುಹುಳದ ಔಷಧಿಗಳ ವಿತರಣೆ

ಅಯ್ಯನಕಟ್ಟೆಯಲ್ಲಿರುವ ನಮ್ಮ ಆರೋಗ್ಯಧಾಮ ಮಲ್ಟಿಸ್ಪೆಷಾಲಿಟಿ ಮೆಡಿಕಲ್ ಸೆಂಟರ್ ನಲ್ಲಿ ಮಾ.31ರಂದು ಉಚಿತವಾಗಿ ವಿಟಮಿನ್ ಡಿ ಹಾಗೂ ಜಂತುಹುಳದ ಔಷಧಿಗಳ ವಿತರಣೆ ನಡೆಯಿತು. ಈ ಸಂದರ್ಭದಲ್ಲಿ ಅಯ್ಯನಕಟ್ಟೆ ನಮ್ಮ ಆರೋಗ್ಯಧಾಮದ ಕೀಲು ಮತ್ತು ಮೂಳೆ ತಜ್ಞರಾದ ಡಾ|ಶ್ರೇಯಸ್ ದೊಡ್ಡಿಹಿತ್ಲು ಉಪಸ್ಥಿತರಿದ್ದು ಮಕ್ಕಳ ಮೂಳೆಗಳ ಆರೋಗ್ಯದ ಬಗ್ಗೆ ಪೋಷಕರಿಗೆ ಕಿವಿಮಾತು ಹೇಳಿದರು. ಮೆಡಿಕಲ್ ಸೆಂಟರ್ ನ ಸರ್ಜನ್ ಮತ್ತು ಆಡಳಿತಾಧಿಕಾರಿಯಾಗಿರುವ ಡಾ|ಕಿಶನ್ ರಾವ್ ಬಾಳಿಲ ಈ ಸಂದರ್ಭ ಉಪಸ್ಥಿತರಿದ್ದರು. ಸುಮಾರು 30ಕ್ಕೂ ಹೆಚ್ಚಿನ ಮಕ್ಕಳು ಇದರ ಸದುಪಯೋಗವನ್ನು ಪಡೆದುಕೊಂಡರು. ಈ ಔಷಧಿ ಮಕ್ಕಳ ಮೂಳೆಗಳ ಸಾಂದ್ರತೆಯನ್ನು ಹೆಚ್ಚಿಸಿ ಮೂಳೆಗಳ ಬಲವರ್ಧನೆಗೆ ಹಾಗೂ ಹೊಟ್ಟೆಯಲ್ಲಿರುವ ಜಂತುಹುಳಗಳನ್ನು ನಿರ್ಮೂಲನೆ ಮಾಡಿ ಮಕ್ಕಳ ಪೋಷಣೆ ಮತ್ತು ಬೆಳವಣಿಗೆಯಲ್ಲಿ ಸಹಕಾರಿಯಾಗಲಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading