Ad Widget

ಕೋವಿ ಡೆಪಾಸಿಟ್ ಆದೇಶದಿಂದ ರೈತರಿಗೆ ವಿನಾಯಿತಿ ನೀಡದಿದ್ದರೇ ತಾಲೂಕು ಕಛೇರಿ ಎದುರು ಪ್ರತಿಭಟನೆ ತೀರ್ಮಾನಿಸಿದ ರೈತ ಸಂಘ



ಚುನಾವಣೆಯ ಸಂದರ್ಭದಲ್ಲಿ ಕೋವಿ ಡೆಪಾಸಿಟ್ ಮಾಡಬೇಕೆಂಬ ಆದೇಶ ಬರುತ್ತಿದ್ದಂತೆ  ರೈತರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸುಳ್ಯ ತಾಲೂಕಿನ ರೈತರಿಗೆ ವಿನಾಯಿತಿ ನೀಡಬೇಕು, ನೀಡದಿದ್ದರೆ ಮಾ.26 ರಂದು ತಾಲೂಕು ಕಚೇರಿಯ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ.



ವಿನಾಯಿತಿ ನೀಡುವ ಬಗ್ಗೆ ಮನವಿ ಸಲ್ಲಿಸಲು ತಾಲೂಕು ಕಚೇರಿಗೆ ರೈತರು ಹೋದರು. ಕೋವಿ ಡೆಪಾಸಿಟ್ ಇರಿಸುವುದರಿಂದ ಎರಡು ತಿಂಗಳುಗಳ ಕಾಲ ಕೋವಿ ಇಲ್ಲದೆ ಕಾಡುಪ್ರಾಣಿಗಳಿಂದ ಬೆಳೆಗಳಿಗೆ ಆಗುವ ಹಾನಿಯ ಬಗ್ಗೆ ಶಿವಕೃಪಾ ಕಲಾಮಂದಿರದಲ್ಲಿ ಸೇರಿ ಸುದೀರ್ಘವಾಗಿ ಚರ್ಚಿಸಿದರು. ಬಳಿಕ ಸಹಾಯಕ ಚುನಾವಣಾಧಿಕಾರಿಗೆ ಮನವಿ ಸಲ್ಲಿಸಿದರು.

ಅಲ್ಲಿ ನ್ಯಾಯವಾದಿ ಎಂ. ವೆಂಕಪ್ಪ ಗೌಡರು, “ಕಾಡುಪ್ರಾಣಿಗಳಿಂದ ರೈತರ ಬೆಳೆಗಳಿಗೆ ಆಗುತ್ತಿರುವ ಸಮಸ್ಯೆ, ಚುನಾವಣೆಯ ಸಂದರ್ಭ ಕೋವಿ ಡೆಪಾಸಿಟ್ ಇರಿಸಿದರೆ ರೈತರಿಗೆ ಆಗುವ ನಷ್ಟದ ಬಗ್ಗೆ ವಿವರಿಸಿ, ಮಾ. 26ರ ಒಳಗೆ ನಮಗೆ ಪೂರಕವಾದ ನಿರ್ಧಾರ ತಿಳಿಸಬೇಕು” ಎಂದರು. ಭರತ್ ಕಾಯರ ಐವರ್ನಾಡು, ಕೆ.ಪಿ. ಜಗದೀಶ್, ಉಮಾಶಂಕರ ಅಡ್ಯಡ್ಕ, ಮೊದಲಾದವರು ಪೂರಕವಾಗಿ ಮಾತನಾಡಿದರು. “ನಿಮ್ಮ ಅಹವಾಲನ್ನು ಲಿಖಿತವಾಗಿ ನೀಡಿ. ಅದನ್ನು ನಾನು ಜಿಲ್ಲಾಧಿಕಾರಿಯವರಿಗೆ ಕಳುಹಿಸಿಕೊಡುತ್ತೇನೆ” ಎಂದು ಸಹಾಯಕ ಚುನಾವಣಾಧಿಕಾರಿ, ಜಿ.ಪಂ. ಉಪಕಾರ್ಯದರ್ಶಿ ಜಗದೀಶ್ ನಾಯ್ಕ್‌ರವರು ಹೇಳಿದಾಗ, “ಸರ್ ನೀವು ಮಾ. 26ರ ಒಳಗೆ ರೈತರಿಗೆ ಪೂರಕವಾದ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ನಾವು ರೈತರು ಪಕ್ಷ ಬೇಧವಿಲ್ಲದೆ ಇದೇ ತಾಲೂಕು ಕಚೇರಿಯ ಮುಂಭಾಗದಲ್ಲಿ ಸೇರಿ ಹಕ್ಕೊತ್ತಾಯ ಮಾಡುತ್ತೇವೆ” ಎಂದು ವೆಂಕಪ್ಪ ಗೌಡರು ಹೇಳಿದರು. ಇದಕ್ಕೆ ಸಂಬಂಧಿಸಿ ಸಿದ್ಧಗೊಳಿಸಿದ ಮನವಿನ್ನು ಎ.ಸಿ.ಯವರಿಗೆ ನೀಡಿದರು. ಬಳಿಕ ಹೊರಗಡೆ ಕೋವಿ ಪರವಾನಿಗೆದಾರರನ್ನುದ್ಧೇಶಿಸಿ ಮಾತನಾಡಿದ ಎಂ. ವೆಂಕಪ್ಪ ಗೌಡರು, “ ಮಾ.26ರಂದು ಬೆಳಿಗ್ಗೆ ೧೦ ಗಂಟೆಗೆ ನಾವೆಲ್ಲಾ ರೈತರು ಕೋವಿ ಲೈಸೆನ್ಸ್ ಇರುವ ಕನಿಷ್ಟ 2 ಸಾವಿರ ರೈತರು ಇಲ್ಲಿ ತಾಲೂಕು ಕಚೇರಿಯ ಮುಂಭಾಗ ಸೇರಬೇಕು. ಕೋವಿ ತೆಗೆದುಕೊಂಡು ಬರುವುದು ಬೇಡ, ಕೋವಿ ಲೈಸೆನ್ಸ್ ತೆಗೆದುಕೊಂಡು ಬರಬೇಕು’ ಎಂದು ಕರೆ ನೀಡಿದರು. ಪಿ.ಎಸ್.ಗಂಗಾಧರ್ ವಂದಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!