Ad Widget

ನೀವು ಜತೆಗಿರಿ ನಾವು ಜತೆಗಿರುವ – ರಾಜಕೀಯ ಹೆಸರಲ್ಲಿ ಕಾರ್ಯಕರ್ತರು ಜಗಳ ಮಾಡದಿರಿ


ಲೋಕಸಭಾ ಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ರಾಜಕೀಯ ಪೈಪೋಟಿ, ಕೆಸರೆರೆಚಾಟ ಆರಂಭವಾಗಿದೆ.‌ ಎಲ್ಲ ಪಕ್ಷಗಳ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯು ಮುಗಿದಂತಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಇದುವರೆಗೂ ಬಾರದ ನಾಯಕರ ದಂಡು ಹಳ್ಳಿ ಹಳ್ಳಿಗೆ ಪ್ರವೇಶ ಆರಂಭಿಸಿತ್ತಾರೆ. ಕಾರ್ಯಕರ್ತರ ಮನಸ್ಸನ್ನು ಉದ್ರೇಕಗೊಳಿಸುವ ಪ್ರಸಂಗಳು ಆರಂಭವಾಗುತ್ತದೆ. ಕೆಲವೆಡೆ ಕಾರ್ಯಕರ್ತರ ಮಧ್ಯೆ ಜಟಾಪಟಿಯೂ ಆರಂಭವಾಗಿ ಕಾರ್ಯಕರ್ತರು ಬಲಿಪಶುಗಳಾಗುವ ಸಂದರ್ಭವು ಬರುತ್ತದೆ. ನಮ್ಮದು ಬುದ್ಧಿವಂತರ ಜಿಲ್ಲೆಯಾದ್ದರಿಂದ ಸಣ್ಣಪುಟ್ಟ ಜಗಳಗಳಿಗೆ ಮುಗಿದು ಹೋದರೇ ಕೇರಳ, ಪಶ್ಚಿಮ ಬಂಗಾಳ ಮತ್ತಿತರ ರಾಜ್ಯಗಳಲ್ಲಿ ಕೊಲೆಯೇ ನಡೆದು ಹೋಗುತ್ತದೆ.

ಸುಳ್ಯ ಕೋಮುಸೂಕ್ಷ್ಮ ಪ್ರದೇಶವು ಆಗಿರುವುದರಿಂದ ರಾಜಕೀಯ ನಾಯಕರು ಮಾತಿನಲ್ಲಿ ಹಿಡಿತವಿಟ್ಟು ಮಾತನಾಡುವ ಅನಿವಾರ್ಯತೆಯು ಇದೆ ಹಾಗೂ ಕೆಲವರ ಭಾಷಣಗಳಿಂದ ಕಾರ್ಯಕರ್ತರು ದಾರಿತಪ್ಪುವ ಸಂದರ್ಭಗಳು ಇರುತ್ತದೆ. ಇದಕ್ಕಾಗಿಯೇ ಚುನಾವಣಾ ಆಯೋಗ ಕೂಡ ಹದ್ದಿನ ಕಣ್ಣಿಟ್ಟು ನೋಡುತ್ತಿದೆ. ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಿಗೆ ಕೆಲ ನಿರ್ಬಂಧಗಳನ್ನು ಹೇರಿದೆ.

ಪಕ್ಷಗಳ ಅಭ್ಯರ್ಥಿಗಳು, ನಾಯಕರು ಜತೆಯಾಗಿಯೇ ಸೇರುತ್ತಾರೆ. ಊಟ,ಚಾ,ಕಾಪಿ ಜತೆಗೆ ಕುಡಿಯುತ್ತಾರೆ. ಆದರೇ ಕಾರ್ಯಕರ್ತರು ಹಾಗೇ ಇರುವುದಿಲ್ಲ. ಪಕ್ಷಗಳ ಧ್ವಜ,ಕ್ಯಾಪ್, ಟೀಶರ್ಟ್ ಧರಿಸಿ ಪರಸ್ಪರ ವೈರಿಗಳಂತೆ ಕಾಣಸಿಗುತ್ತಾರೆ. ನಾಯಕರು, ಅಭ್ಯರ್ಥಿಗಳು ಎಂದಾದರೂ ಗಲಾಟೆ ಮಾಡಿಕೊಂಡದ್ದನ್ನು ನೋಡಿದ್ದೀರಾ. ಮತ್ತೆ ನಾವ್ಯಾಕೆ ನಾಯಕರಂತೆ ಕಾರ್ಯಕರ್ತರು ಇರಬಾರದರು. ಯಾವುದೇ ದ್ವೇಷ ಇದ್ದರೇ ಮತದಾನ ಮಾಡುವ ಮೂಲಕ ತೋರ್ಪಡಿಸಲೇ ಪ್ರಜಾಪ್ರಭುತ್ವ ಇರುವುದು. ಅದನ್ನು ಮೊದಲು ಮಾಡುವ. ನಾವು ಕೂಡ ಎಲ್ಲರ ಜತೆಗೆ ಸೇರುವ, ರಾಜಕೀಯ ವೈಷಮ್ಯ ಬೆಳೆಸದೇ ಕಡ್ಡಾಯ ಮತದಾನ ಮಾಡಿ ಮಾದರಿಯಾಗೋಣ.

✒ಮುರಳೀಧರ ಅಡ್ಡನಪಾರೆ✒️

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!