Ad Widget

ದ.ಕ.ಲೋಕಸಭಾ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟರಿಂದ ಸುಳ್ಯ ಕ್ಷೇತ್ರದ ಕ್ಲಿಕ್ ರೌಂಡಪ್ – ಮಠ,ಮಂದಿರ, ದೈವಸ್ಥಾನ ಹಾಗೂ ಹಿರಿಯ ಮುಖಂಡರ ಭೇಟಿ ಮಾಡಿದ ಕ್ಯಾಪ್ಟನ್

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ  ಕ್ಯಾಪ್ಟನ್ ಬ್ರಿಜೇಶ್ ಚೌಟರವರು ಸುಳ್ಯ ವಿಧಾನಸಭಾ ಕ್ಷೇತ್ರದಾದ್ಯಂತ ಬಿರುಸಿನ  ಪ್ರವಾಸ ಕೈಗೊಂಡು ಮಠ ಮಂದಿರ, ಪ್ರತಿಮೆಗೆ ಮಾಲಾರ್ಪಣೆ, ಹಿರಿಯರ ಭೇಟಿ ಸೇರಿದಂತೆ ಸುಳ್ಯ ಕ್ಷೇತ್ರದಾದ್ಯಂತ ಸಂಚಲನ ಸೃಷ್ಠಿಸಿದರು. 

ಚೆನ್ನಕೇಶವ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಪ್ರವಾಸಕ್ಕೆ ಚಾಲನೆ ನೀಡಿದರು. ಸುಳ್ಯ ಹಳೆ ಬಸ್ಸು ತಂಗುದಾಣದ ಬಳಿ ಡಾ. ಕುರುಂಜಿ ವೆಂಕಟ್ರಮಣ ಗೌಡರ ಪುತ್ಥಳಿಗೆ ಮಾಲಾರ್ಪಣೆ ಗೈದು, ಸುಳ್ಯ ನಗರಪಂಚಾಯತ್ ಸೈನಿಕ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿ, ಸುಳ್ಯ ಕಲ್ಕುಡ ದೈವಸ್ಥಾನಕ್ಕೆ ಭೇಟಿ ನೀಡಿದರು.

ಸುಳ್ಯ ಭಾ.ಜ.ಪಾ ಕಛೇರಿಗೆ ಭೇಟಿ ನೀಡಿ ಚುನಾವಣಾ ಕಛೇರಿ ಉದ್ಘಾಟನೆ ನೆರವೇರಿಸಿ ಬಳಿಕ ಅಲೆಟ್ಟಿ, ಅಜ್ಜಾವರ, ಸುಳ್ಯ ನಗರ ಮಹಾಶಕ್ತಿ ಕೇಂದ್ರಗಳ ಕಾರ್ಯಕರ್ತರ ಸಭೆ ಮುಗಿಸಿ,

ಡಾ. ಚಿದಾನಂದ ಕೆ.ವಿ. ಇವರ ಮನೆಗೆ ಭೇಟಿ ನೀಡಿ ಸಹಕಾರ ಯಾಚಿಸಿದರು. ನಂತರ ಮಾಜಿ ಸಚಿವರಾದ ಎಸ್. ಅಂಗಾರ ಇವರ ಮನೆಗೆ ಭೇಟಿ ನೀಡಿ ಆಶೀರ್ವಾದ ಪಡೆದರು. ಮಾವಿನಕಟ್ಟೆ ಶ್ರೀ ವಿಷ್ಣುಮೂರ್ತಿ ದೈವಸ್ಥಾನಕ್ಕೆ ಭೇಟಿ ನೀಡಿದ ಬಳಿಕ  ಸಂಘದ ಹಿರಿಯರಾದ ಚಂದ್ರಶೇಖರ ತಳೂರು ಇವರ ಮನೆ ಭೇಟಿ ಆಶೀರ್ವಾದ ಪಡೆದರು. 

ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವರ ದರ್ಶನ ಪಡೆದುಕೊಂಡು, ಸಂಪುಟ ನರಸಿಂಹ ಮಠಾಧೀಶರ ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು. ನಂತರ ಬ್ರಾಹ್ಮರಿ ನೆಸ್ಟ್ ನಲ್ಲಿ ಸುಬ್ರಹ್ಮಣ್ಯ, ಗುತ್ತಿಗಾರು ಮಹಾಶಕ್ತಿಕೇಂದ್ರ ಕಾರ್ಯಕರ್ತರ ಸಭೆ ನಡೆಸಿ ಕಾರ್ಯರ್ತರ ಸಹಕಾರ ಯಾಚಿಸಿದರು. ನಂತರ ಶಾಸಕರಾದ ಭಾಗೀರಥಿ ಮುರುಳ್ಯ ಇವರ ಮನೆ ಭೇಟಿ ನೀಡಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಆಲಂಕಾರು ಇದರ ಸಭಾಭವನದಲ್ಲಿ ಕೊಯಿಲ, ನೆಲ್ಯಾಡಿ, ಕಡಬ, ಬೆಳಂದೂರು ಮಹಾಶಕ್ತಿಕೇಂದ್ರದ ಕಾರ್ಯಕರ್ತರ ಸಭೆ ನಡೆಸಲಾಯಿತು. ಹಿರಿಯರಾದ ದಿವಾಕರ ರಾಮಕುಂಜ ಇವರ ಮನೆ ಭೇಟಿ ನೀಡಲಾಯಿತು. ಹಿರಿಯರಾದ ಅಣ್ಣಾ ವಿನಯಚಂದ್ರ ಇವರ ಮನೆ ಭೇಟಿ ನೀಡಲಾಯಿತು. ನಂತರ ಪೆರುವಾಜೆ ಜೆ.ಡಿ ಆಡಿಟೋರಿಯಂ ನಲ್ಲಿ ಬೆಳ್ಳಾರೆ ಮಹಾಶಕ್ತಿಕೇಂದ್ರದ ಕಾರ್ಯಕರ್ತರ ಸಭೆ ನಡೆಸಲಾಯಿತು. ದಿ. ಪ್ರವೀಣ್ ನೆಟ್ಟಾರ್ ಮನೆಗೆ ಭೇಟಿ ನೀಡಲಾಯಿತು. ಗೌರಿಪುರಂ ಶ್ರೀರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಲಾಯಿತು. ಐವರ್ನಾಡು ದಿ. ಎನ್ ಎಂ ಬಾಲಕೃಷ್ಣ ಗೌಡ ಪುತ್ಥಳಿಗೆ ಮಾಲಾರ್ಪಣೆ ಗೈದು, ಹಿರಿಯರಾದ ಉಪೇಂದ್ರ ಕಾಮತ್ ವಿನೋಬನಗರ ಇವರ ಮನೆ ಭೇಟಿ ನೀಡಲಾಯಿತು. ಹಿರಿಯರಾದ ನ. ಸೀತಾರಾಮ ಇವರ ಮನೆ ಭೇಟಿ ನೀಡಲಾಯಿತು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಪ್ರಮುಖರು, ಬಿಜೆಪಿಯ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಹಿತೈಷಿಗಳು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!