Ad Widget

ಶತಮಾನ ಕಂಡ ಶಾಲೆಯ ಅಭಿವೃದ್ಧಿಗೆ ಹಿರಿಯ ವಿದ್ಯಾರ್ಥಿಗಳ ತೀರ್ಮಾನ – ಎಂ.ಬಿ.ಸದಾಶಿವ

ಶತಮಾನ ಕಂಡ ಸುಳ್ಯದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮಾದರಿ ಶಾಲೆಯನ್ನಾಗಿಸಲು ಹಿರಿಯ ವಿದ್ಯಾರ್ಥಿಗಳು ಸಮಿತಿ ರಚಿಸಿ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಎಂ.ಬಿ‌. ಸದಾಶಿವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಸುಳ್ಯದ ಜ್ಯೋತಿ ಸರ್ಕಲ್ ಬಳಿಯ ಸ.ಮಾ.ಹಿ.ಪ್ರಾ.ಶಾಲೆಯನ್ನು ಆಧುನಿಕ ಅಗತ್ಯಗಳಿಗೆ ಅನುಗುಣವಾಗಿ ಶಾಲೆಯನ್ನು ಪುನರ್ ನಿರ್ಮಾಣಗೊಳಿಸುವ ಅಭಿವೃದ್ಧಿ ಯೋಜನೆಯ ನೀಲಿ ನಕಾಶೆಯನ್ನು ಸಿದ್ಧಪಡಿಸಲಾಗಿದೆ. ಸುರಕ್ಷಿತ ಮತ್ತು ಸುಂದರ ಪರಿಸರದಲ್ಲಿ ಅತ್ಯಾಧುನಿಕ ಮಾದರಿಯ ಶಾಲಾ ಕೊಠಡಿಗಳ ನಿರ್ಮಾಣ, ನವೀನ ಪರಿಕರಗಳು, ಬೌದ್ಧಿಕ ಕ್ರಿಯಾಶೀಲತೆಗೆ ಪೂರಕವಾಗುವ ತಂತ್ರಜ್ಞಾನದ ಅಳವಡಿಕೆ, ಕೌಶಲ್ಯ ಅಭಿವೃದ್ಧಿ, ನೈತಿಕ ಶಿಕ್ಷಣ ವಲ್ಲದೆ ಈಜುಕೊಳ, ಬಯಲು ರಂಗಮಂದಿರ, ಮಕ್ಕಳ ಉದ್ಯಾನ, ಹಣ್ಣು ತರಕಾರಿಗಳ ಕೈತೋಟ ನಿರ್ಮಾಣ ಮಾಡಿ ಮಾದರಿ ಶಾಲೆಯನ್ನು ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದೆ.

ಈ ನಿಟ್ಟಿನಲ್ಲಿ ನೂತನವಾಗಿ ಸಮಿತಿ ರಚಿಸಲಾಗಿದ್ದು, ಸಮಿತಿಯ ಗೌರವಾಧ್ಯಕ್ಷರಾಗಿ ಡಾ. ಕೆ.ವಿ ಚಿದಾನಂದ, ಕಾರ್ಯಾಧ್ಯಕ್ಷರಾಗಿ ಎಂ ಬಿ ಸವಾಶಿವ, ಉಪಾಧ್ಯಕ್ಷರುಗಳಾಗಿ ಅಶೋಕ್ ಪ್ರಭು, ಡಾ. ರಂಗಯ್ಯ, ರವಿರಾಜ್ ಕಮಿಲಡ್ಕ, ಎಂ.ಎಸ್ ಪುರುಷೋತ್ತಮ, ಶ್ರೀಮತಿ ಕಮಲಾಕ್ಷಿ, ಕಾರ್ಯದರ್ಶಿಗಳಾಗಿ ಗೋಕುಲ್ ದಾಸ್, ಅಬ್ದುಲ್ ರಶೀದ್ ಜಟ್ಟಿಪಳ್ಳ, ಶ್ರೀಮತಿ ಸುನಂದಾ ಶೆಟ್ಟಿ, ಖಜಾಂಚಿಯಾಗಿ ಡಾ.ಸಾಯಿಗೀತ ಜ್ಞಾನೇಶ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶ್ರೀಮತಿ ಸುಸ್ಮಿತಾ ಜಾಕೆ, ಸುಮತಿ ನಾಯಕ್, ಖಲಂದರ್, ಎಂ.ಎಸ್ ಜಯಪ್ರಕಾಶ್ ಬಾಲಕೃಷ್ಣ, ವಿಜಯಾನಂದ ಆಯ್ಕೆಮಾಡಲಾಗಿದೆ

ಈ ಯೋಜನೆಯಲ್ಲಿ ಪಾಲ್ಗೊಳ್ಳಲು ಆಸಕ್ತಿ ಇರುವ ವಿದ್ಯಾಭಿಮಾನಿಗಳು, ಹಳೆ ವಿದ್ಯಾರ್ಥಿಗಳು ಕಛೇರಿಯ ಮೊಬೈಲ್ ಸಂಖ್ಯೆ 9035299466 ಯನ್ನು ವಾಟ್ಸಾಪ್ ಮೂಲಕ ಸಂಪರ್ಕಿಸಬಹುದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಆರ್ ಕೆ ಭಟ್ , ಡಾ.ರಂಗಯ್ಯ , ಗೋಕುಲಗ ದಾಸ್ , ರವಿರಾಜ್ ಕಮಿಲಡ್ಕ , ಅಬ್ದುಲ್ ರಶೀದ್ ಜಟ್ಟಿಪಳ್ಳ , ಖಲಂದರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Posts

error: Content is protected !!