- Saturday
- November 23rd, 2024
ಕೊಲ್ಲಮೊಗ್ರ ಗ್ರಾಮದ ಶಿವಾಲ ಸಚಿತ್ ರವರು ಎರಡು ಕಿಡ್ನಿಯ ವೈಫಲ್ಯದಿಂದ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಪಡೆಯುತ್ತಿದ್ದು, ಗೆಳೆಯರ ಬಳಗ ದೇವ ಇದರ ವತಿಯಿಂದ ಸುಮಾರು ಹತ್ತು ಸಾವಿರ ರೂಗಳನ್ನು ಚಿಕಿತ್ಸೆಗಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಗೆಳೆಯರ ಬಳಗದ ಅಧ್ಯಕ್ಷರಾದ ಮುಕುಂದ ಹಿರಿಯಡ್ಕ ಗೌರವಾಧ್ಯಕ್ಷರಾದ ಯೋಗೀಶ್ ದೇವ, ಸದಸ್ಯರಾದ ಉದಯ ಕುಮಾರ್ ದೇವ, ಪ್ರಶಾಂತ ದೇವ...
ಡಿಕೆ ಶಿವಕುಮಾರ್ ಅವರ ಮೇಲಿದ್ದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಸಿಬಿಐ ತನಿಖೆಗೆ ನೀಡಿದ್ದ ಆದೇಶವನ್ನು ವಾಪಸ್ ಪಡೆದಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ನಿರ್ಣಯ ಸ್ವಾಗತಾರ್ಹ ಮತ್ತು ಸಮರ್ಥನೀಯ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಡಂಗಾಯ ಇಂದು ಸುಳ್ಯ ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಹಿಂದೆ ಗುಜರಾತ್ನಲ್ಲಿ ರಾಜ್ಯಸಭಾ ಚುನಾವಣೆ ನಡೆಯುವಾಗ ಕಾಂಗ್ರೆಸ್ನ ಹಿರಿಯ...
ಸುಳ್ಯ: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮತದಾರರ ಸಾಕ್ಷರತಾ ಸಂಘ ಶ್ರೀ ಶಾರದಾ ಮಹಿಳಾ ಪದವಿಪೂರ್ವ ಕಾಲೇಜು ಸುಳ್ಯ ಇವುಗಳ ಜಂಟಿ ಆಶ್ರಯದಲ್ಲಿ ಮತದಾನದ ಸಾಕ್ಷರತೆಯ ಬಗ್ಗೆ ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳನ್ನು ಕಾಲೇಜಿನಲ್ಲಿ ಯೋಜಿಸಲಾಗಿದೆ.ಸ್ಪರ್ಧಾ ಕಾರ್ಯಕ್ರಮದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಗೌಡ ವಿದ್ಯಾ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ರೇವತಿ ನಂದನ್ ದೀಪರವರು...
ವಿಶ್ವ ಹಿಂದೂ ಪರಿಷದ್ ಬಜರಂಗದಳ ಅಯೋಧ್ಯೆ ಶಾಖೆ ಎಲಿಮಲೆ ಘಟಕ ಇದರ ವತಿಯಿಂದ ಸಾರ್ವಜನಿಕ ಗೋ ಪೂಜಾ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನ.25 ರಂದು ನಡೆಯಿತು. ಮಾತೆಯರಿಂದ ಗೋಪೂಜೆ ನಡೆದ ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ಎಲಿಮಲೆ ಘಟಕದ ಅಧ್ಯಕ್ಷರಾದ ಬೋಜಪ್ಪ ಹರ್ಲಡ್ಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದಿಕ್ಸೂಚಿ ಭಾಷಣಕಾರರಾಗಿ ವಾಗ್ಮಿ ಶ್ರೀಕಾಂತ್...
ಸುಬ್ರಹ್ಮಣ್ಯ: ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ನಾಗಾರಾಧನೆಯ ಪುಣ್ಯ ತಾಣ ಮತ್ತು ರಾಜ್ಯದ ನಂಬರ್ ವನ್ ಆದಾಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರಕಾರದ ಆದೇಶದ ಪ್ರಕಾರ ಜ.31ರಂದು ಸರಳ ಸಾಮೂಹಿಕ ವಿವಾಹ ಮಾಂಗಲ್ಯ ಭಾಗ್ಯ ನಡೆಯಲಿದೆ. ಡಿ.31 ವಧು-ವರರು ನಿಗದಿ ದಾಖಲೆಗಳೊಂದಿಗೆ ಶ್ರೀ ದೇವಳಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಆದುದರಿಂದ...
ಸುಳ್ಯದ ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ, ಸಾಹಿತಿ, ಜ್ಯೋತಿಷಿ, ಗಾಯಕರಾದ ಎಚ್ ಭೀಮರಾವ್ ವಾಷ್ಠರ್ ಅವರನ್ನು ಇತ್ತೀಚಿಗೆ ಕಾಸರಗೋಡಿನ ಬದಿಯಡ್ಕದ ಸಂಸ್ಕೃತಿ ಸಭಾಂಗಣದಲ್ಲಿ ಗಡಿನಾಡ ಗಾನಕೋಗಿಲೆ ಕಲಾವಿದರ ವೇದಿಕೆಯ ವತಿಯಿಂದ ಜರುಗಿದ ಕನ್ನಡ ರಾಜ್ಯೋತ್ಸವ ಮತ್ತು ಕರೋಕೆ ಸಂಗೀತ ಸ್ಪರ್ಧೆಯ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಗಡಿನಾಡ ಗಾನಕೋಗಿಲೆ ಕಲಾವಿದರ ವೇದಿಕೆಯ ಅಧ್ಯಕ್ಷ ವಸಂತ್...
ಸುಬ್ರಹ್ಮಣ್ಯ: ಮತದಾನವು ಪ್ರತಿ ಪ್ರಜೆಯ ಅತ್ಯಂತ ಪವಿತ್ರವಾದ ಕರ್ತವ್ಯ.ಪ್ರತಿಯೊಬ್ಬರೂ ಚುನಾವಣೆಯಲ್ಲಿ ಮತಹಾಕುವ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ವಿದ್ಯಾರ್ಥಿ ದೆಸೆಯಿಂದಲೇ ಮಕ್ಕಳಿಗೆ ಮತದಾನದ ಜಾಗೃತಿ ಮೂಡಿಸಲು ಮತದಾರ ಜಾಗೃತ ಸಂಘವು ಹೆಚ್ಚಿನ ಕಾರ್ಯಗಳನ್ನು ನಡೆಸುತ್ತಿದೆ. ಈ ಕಾರ್ಯಗಳು ವಿದ್ಯಾರ್ಥಿಗಳಿಗೆ ಮತದಾನದ ಶ್ರೇಷ್ಠತೆಯನ್ನು ಅರಿಯಲು ಸಹಕಾರಿಯಾಗಿದೆ.ಯುವ ಜನಾಂಗವು ಮತದಾನವನ್ನು ತಮ್ಮ ಬದುಕಿನ ಶ್ರೇಷ್ಠ ಕರ್ತವ್ಯ ಎಂದು...
ಪದವಿ ಪೂರ್ವ ಶಿಕ್ಷಣ ಇಲಾಖೆಯ ಕೊಡಗು ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಸಂಪಾಜೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಹರ್ಷಾನ ಹೆಚ್. ಹ್ಯಾಮರ್ ಥ್ರೋ(ಬಾಲಕಿಯರ ವಿಭಾಗ) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಹಾಗೂ ಬಾಲಕರ ವಿಭಾಗದ ಹ್ಯಮರ್ ಥ್ರೋ ಸ್ಪರ್ಧೆಯಲ್ಲಿ ಜಗನ್ ಡಿ .ಹೆಚ್. ದ್ವಿತೀಯ ಸ್ಥಾನವನ್ನು ಪಡೆದು ಈ ಇಬ್ಬರು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ...
ತೋಟಗಾರಿಕೆ ಇಲಾಖೆ ಸುಳ್ಯ ಇದರ ವತಿಯಿಂದ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಗ್ರಂಥಾಲಯ ಸಭಾಭವನದಲ್ಲಿ ನ.28 ರಂದು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ರೈತರಿಗೆ ಜೇನು ಕೃಷಿ, ತಾಳೆ ಕೃಷಿ ಹಾಗೂ ಹನಿ ನೀರಾವರಿ ಬಗ್ಗೆ ತರಬೇತಿ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Loading posts...
All posts loaded
No more posts