- Friday
- April 18th, 2025

ಸುಮಾರು 41 ವರ್ಷಗಳ ಹಿಂದೆ ಊರಿನ ವಿದ್ಯಾಭಿಮಾನಿಗಳ ಹೋರಾಟದ ಫಲವಾಗಿ ಸ್ಥಾಪನೆಗೊಂಡು ಸಾವಿರಾರು ವಿದ್ಯಾರ್ಥಿಗಳ ಬದುಕನ್ನು ರೂಪಿಸಿದ ಪ್ರೌಢಶಾಲೆಯೊಂದು ಇಂದು ವಿದ್ಯಾರ್ಥಿಗಳ ಕೊರತೆಯಿಂದಾಗಿ ಮುಚ್ಚುವಂತಹ ಪರಿಸ್ಥಿತಿಗೆ ಬಂದು ತಲುಪಿರುವ ಘಟನೆ ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಗ್ರಾಮದಿಂದ ವರದಿಯಾಗಿದೆ.ಸುಮಾರು 41 ವರ್ಷಗಳ ಹಿಂದೆ ಅಂದರೆ 1982ನೇ ಇಸವಿಯಲ್ಲಿ ದುರ್ಗದಾಸ್ ಮಲ್ಲಾರ, ಶಿವ ಸುಬ್ರಹ್ಮಣ್ಯ ಭಟ್ ಪಲ್ಲತ್ತಡ್ಕ...

ಸುಳ್ಯ ಪುತ್ತೂರು ರಸ್ತೆಯ ಹಳೆಗೇಟು ಎಂಬಲ್ಲಿ ರಿಕ್ಷಾ ಮತ್ತು ಓಮಿನಿ ಕಾರಿನ ನಡುವೆ ಡಿಕ್ಕಿ ಸಂಭವಿಸಿದ್ದು ಅಪಘಾತದ ತೀವೃತೆಗೆ ಅಟೋ ಚಾಲಕ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತಪಟ್ಟವರು ಜಾಲ್ಸೂರು ಗ್ರಾಮದ ಆಟೋ ಚಾಲಕ ಬಾಬು ಪಾಟಾಳಿ ಎಂದು ತಿಳಿದುಬಂದಿದ್ದು ಅವರನ್ನು ಸುಳ್ಯದ ಸರಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡುತ್ತಿದ್ದ ವೇಳೆ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದ್ದು ಹೆಚ್ಚಿನ...

ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಪಂಜದ ಯುವಕನೊಬ್ಬ ಪಾಂಡಿಚೇರಿಯಲ್ಲಿ ಸಮುದ್ರ ಪಾಲಾದ ಘಟನೆ ವರದಿಯಾಗಿದೆ. ಕೂತ್ಕುಂಜ ಗ್ರಾಮದ ಚಿದ್ದಲ್ಲು ಗೋಪಾಲ್ ಮತ್ತು ಹೊನ್ನಮ್ಮ ದಂಪತಿಯ ಪುತ್ರ ಬಿಪಿನ್ ಜೀವ ಕಳೆದುಕೊಂಡ ಯುವಕ. ಬೆಂಗಳೂರಿನ ಕಂಪೆನಿಯೊಂದರಲ್ಲಿ ಇಂಜಿನಿಯರ್ ಆಗಿದ್ದ ಬಿಪಿನ್, ಗೆಳೆಯರೊಂದಿಗೆ ಪಾಂಡಿಚೇರಿಗೆ ಬೀಚ್‌ಗೆ ಹೋಗಿದ್ದ ವೇಳೆ ಸಮುದ್ರಪಾಲಾಗಿದ್ದು, ಇಂದು ಮೃತದೇಹ ಪತ್ತೆಯಾಯಿತೆಂದು ತಿಳಿದುಬಂದಿದೆ. ಮೃತರು ತಂದೆ ತಾಯಿ, ಸಹೋದರಿ...

ಲಯನ್ಸ್ ಕ್ಲಬ್ ಪಂಜ ಇದರ ವತಿಯಿಂದ ಪೀಸ್ ಪೋಸ್ಟರ್ ಗೆ ಆಯ್ಕೆ ಮಾಡಲು ಸ್ಥಳೀಯ ಶಾಲೆಗಳ 25 ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಶಾರದಾoಬ ಭಜನಾ ಮಂದಿರ ಪಂಜ ,ಇಲ್ಲಿ ನಡೆಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆ ಯನ್ನ ಲಯನ್ಸ್ ಕ್ಲಬ್ ಪಂಜ ಇದರ ಅಧ್ಯಕ್ಷ ದಿಲೀಪ್ ಬಾಬ್ಲು ಬೆಟ್ಟು ವಹಿಸಿದ್ದರು .ಮುಖ್ಯ ಅತಿಥಿಯಾಗಿ ವೇದಿಕೆಯಲ್ಲಿ ಚಿತ್ರ ಕಲಾ ಶಿಕ್ಷಕ...

ಇಂದು ಮಹಿಳೆಯರು ಸಮಾಜದ ವಿವಿಧ ಸ್ತರಗಳಲ್ಲಿ ಕ್ರಿಯಾಶೀಲರಾಗಿ ತೊಡಗಿಕೊಳ್ಳುತ್ತಿದ್ದು ತಮ್ಮ ಹಲವು ಒತ್ತಡದ ಮಧ್ಯೆ ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡಲು ಅಸಾಧ್ಯವಾಗಿದ್ದು, ವಿವಿಧ ಸಮಸ್ಯೆಗಳನ್ನು ಎದುರಿಸಬೇಕಾದ ಅನಿವಾರ್ಯತೆ ಇದೆ. ಇದರಿಂದ ಹೊರಬಂದು ಆರೋಗ್ಯಯುತ ಜೀವನಕ್ಕಾಗಿ ಇಂತಹ ಆರೋಗ್ಯ ಮಾಹಿತಿ ಕಾರ್ಯಾಗಾರ ಅತೀ ಅಗತ್ಯ ಎಂದು ಸುಳ್ಯದ ಕೆ.ವಿ.ಜಿ ಮೆಡಿಕಲ್ ಕಾಲೇಜಿನ ಖ್ಯಾತ ಹೆರಿಗೆ ಮತ್ತು...

ಚೊಕ್ಕಾಡಿ ಪ್ರೌಢ ಶಾಲೆ ಕುಕ್ಕುಜಡ್ಕ ಇಲ್ಲಿನ 10ನೇ ತರಗತಿ ವಿದ್ಯಾರ್ಥಿನಿ ರಚಿತ ಎಂ.ಪಿ ಈಟಿ ಎಸೆತದಲ್ಲಿ ಜಿಲ್ಲಾ ಮಟ್ಟದಲ್ಲಿ ದ್ವಿತಿಯ ಸ್ಥಾನ ಹಾಗು ಭಾನವಿ 9 ನೇ ತರಗತಿ 200 ಮೀ ಓಟದಲ್ಲಿ ದ್ವಿತಿಯ ಸ್ಥಾನದೊಂದಿಗೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸರಕಾರಿ ಪ್ರೌಢಶಾಲೆ ಎಣ್ಮೂರು ಇಲ್ಲಿ 2023-24ನೇ ಸಾಲಿನ ತಾಯಂದಿರ ಸಮಿತಿ ಇತ್ತೀಚೆಗೆ ರಚನೆಗೊಂಡಿದ್ದು, ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ತಾಯಂದಿರ ಸಮಿತಿ ಅಧ್ಯಕ್ಷೆಯಾಗಿ ಶ್ರೀಮತಿ ನಯನಾ ರೈ ಆಯ್ಕೆಯಾದರು. ಪದಾಧಿಕಾರಿಗಳಾಗಿ ಶ್ರೀಮತಿ ಮೀನಾಕ್ಷಿ, ಶ್ರೀಮತಿ ಪದ್ಮಪ್ರಿಯಾ, ಶ್ರೀಮತಿ ಶಕುಂತಲಾ, ಶ್ರೀಮತಿ ಶುಭಲಕ್ಷೀ, ಶ್ರೀಮತಿ ಸವಿತಾ, ಶ್ರೀಮತಿ ಸವಿತಾ ಎನ್, ಶ್ರೀಮತಿ ಶಾಲಿನಿ, ಶ್ರೀಮತಿ ಆಸ್ಯಮ್ಮ,ಶ್ರೀಮತಿ ದಿವ್ಯಾ ಎಂ.ಕೆ...

ಸುಳ್ಯ ತಾಲೂಕಿನ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳ ಸಭೆಯ ನ.3 ರಂದು ಮಡಪ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಉಷಾ ಜಯರಾಮ್ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಈ ಸಭೆಯ ವೇದಿಕೆಯಲ್ಲಿ ಆರಂತೋಡು ಗ್ರಾಪಂ ಅಧ್ಯಕ್ಷರಾದ ಕೇಶವ ಅಡ್ತಲೆ, ಆಲೆಟ್ಟಿ ಗ್ರಾ.ಪಂ.ಅಧ್ಯಕ್ಷೆ ವೀಣಾ ವಸಂತ್ ಮತ್ತು ಮುರುಳ್ಯ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಜಾನಕಿ ಮುರುಳ್ಯ ಉಪಸ್ಥಿತರಿದ್ದರು....

ಯುವಜನ ಸಂಯುಕ್ತ ಮಂಡಳಿ ವತಿಯಿಂದ ಪೂರ್ವಾಧ್ಯಕ್ಷ ಶೈಲೇಶ್ ಅಂಬೆಕಲ್ಲು ಅವರಿಗೆ ಸನ್ಮಾನ ಕಾರ್ಯಕ್ರಮ ನ.4 ರಂದು ಮಂಡಳಿಯ ಸಭಾಭವನದಲ್ಲಿ ನಡೆಯಿತು. ದ.ಕ. ಜಿಲ್ಲೆಯ ಯುವಜನ ಒಕ್ಕೂಟದ ಸ್ಥಾಪಕಾಧ್ಯಕ್ಷರಾಗಿದ್ದು, 25 ವರ್ಷಗಳಿಂದ ಯುವಜನ ಕ್ಷೇತ್ರದಲ್ಲಿ ಪಾರದರ್ಶಕವಾಗಿ ಸೇವೆ ಸಲ್ಲಿಸಿರುವ ಶೈಲೇಶ್ ಅಂಬೆಕಲ್ಲುರವರು ಇದೀಗದೇವಚಳ್ಳ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು....

ಸವಣೂರಿನ ಕುಮಾರಾಧಾರಾ ನದಿಯಲ್ಲಿ ಇಡ್ಯಾಡಿ ಎಂಬಲ್ಲಿ ಅಪರಿಚಿತ ಗಂಡಸಿನ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಸುಳ್ಯದ ಪ್ರಗತಿ ಆ್ಯಂಬುಲೆನ್ಸ್ ಮಾಲೀಕ ಅಚ್ಚು ಮತ್ತು ಲೈಫ್‌ಕೇರ್ ಆ್ಯಂಬುಲೆನ್ಸ್ ನ ಮಾಲೀಕ ಶಮೀಮ್ ಹಾಗೂ ಇತರರು ಸತತ ಎರಡು ಗಂಟೆಗಳ ನಿರಂತರ ಕಾರ್ಯಾಚರಣೆ ನಡೆಸಿದ ಬಳಿಕ ಬೆಳ್ಳಾರೆ ಪೊಲೀಸರ ಸಮ್ಮುಖದೊಂದಿಗೆ ಶವವನ್ನು ಮೇಲಕ್ಕೆತ್ತಿದ್ದು ವ್ಯಕ್ತಿಯ ಗುರುತು ಇನ್ನು ಪತ್ತೆಯಾಗಿಲ್ಲ...

All posts loaded
No more posts