ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರವಾದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ.10 ರಿಂದ ಡಿ.24 ರವರೆಗೆ ಚಂಪಾಷಷ್ಠಿ ಮಹೋತ್ಸವ ನಡೆಯಲಿದ್ದು, ಡಿ.10 ರಂದು ಕೊಪ್ಪರಿಗೆ ಏರುವುದು ಹಾಗೂ ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ ನಡೆಯಲಿದೆ. ಡಿ.11 ರಂದು ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ ನಡೆಯಲಿದ್ದು, ಡಿ.12 ರಂದು ಲಕ್ಷದೀಪೋತ್ಸವ ನಡೆಯಲಿದೆ. ಡಿ.13 ರಂದು ಶೇಷವಾಹನೋತ್ಸವ, ಡಿ.14 ರಂದು ಅಶ್ವವಾಹನೋತ್ಸವ, ಡಿ.15 ರಂದು ಮಯೂರ ವಾಹನೋತ್ಸವ, ಡಿ.16 ರಂದು ರಾತ್ರಿ ಹೂವಿನ ತೇರಿನ ಉತ್ಸವ, ಡಿ.17 ರಂದು ರಾತ್ರಿ ಪಂಚಮಿ ರಥೋತ್ಸವ, ತೈಲಾಭ್ಯಂಜನ, ಡಿ.18 ರಂದು ಪ್ರಾತಃಕಾಲ ಚಂಪಾಷಷ್ಠಿ ಮಹಾರಥೋತ್ಸವ ನಡೆಯಲಿದೆ. ಡಿ.19 ರಂದು ಅವಭೃತೋತ್ಸವ ಹಾಗೂ ನೌಕಾವಿಹಾರ ನಡೆಯಲಿದ್ದು, ಡಿ.24 ರಂದು ಕೊಪ್ಪರಿಗೆ ಇಳಿಯುವುದು, ರಾತ್ರಿ ನೀರುಬಂಡಿ ಉತ್ಸವ ಹಾಗೂ ದೈವಗಳ ನಡಾವಳಿ ನಡೆಯಲಿದೆ.
ಡಿ.09 ರಂದು ಮೂಲಮೃತ್ತಿಕಾ ಪ್ರಸಾದ ವಿತರಣೆ ನಡೆಯಲಿದೆ.
- Tuesday
- January 28th, 2025