Ad Widget

ಸುಳ್ಯ: ರಾಷ್ಟ್ರೀಯ ಹಬ್ಬಗಳ ದಿನಾಚರಣಾ ಸಮಿತಿ ಮತ್ತು ಸುಳ್ಯ ತಾಲೂಕು ನಾದ ಮಂಟಪ (ರಿ.) ಇದರ ಜಂಟಿ ಆಶ್ರಯದಲ್ಲಿ ಕನಕದಾಸ ಜಯಂತಿ ಕಾರ್ಯಕ್ರಮ

ರಾಷ್ಟ್ರೀಯ ಹಬ್ಬಗಳ ದಿನಾಚರಣಾ ಸಮಿತಿ ಮತ್ತು ಸುಳ್ಯ ತಾಲೂಕು ನಾದ ಮಂಟಪ (ರಿ.) ಇದರ ಜಂಟಿ ಆಶ್ರಯದಲ್ಲಿ ಶ್ರೀ ಕನಕದಾಸ ಜಯಂತಿ ಆಚರಣೆಯು ನ.30ರಂದು ಚೆನ್ನಕೇಶವ ದೇವಸ್ಥಾನದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆ ಹಾಗೂ ಅಧ್ಯಕ್ಷತೆಯನ್ನು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿಯಾದ ಭಾಗೀರಥಿ ಮುರುಳ್ಯರವರು ವಹಿಸಿ, ಮಾತನಾಡಿ ಕನಕದಾಸರೊಬ್ಬರು ಆದರ್ಶಪ್ರಿಯರು ಎಂದು ಹೇಳಿ ಅವರ ಕೀರ್ತನೆಯನ್ನು ಹಾಡಿದರು.
ಮುಖ್ಯ ಅತಿಥಿಗಳಾಗಿ ಚೆನ್ನಕೇಶವ ದೇವಸ್ಥಾನದ ಮೊಕ್ತೇಸರಾದ ಡಾ. ಹರಪ್ರಸಾದ್ ಟಿ. ಭಾಗವಹಿಸಿದ್ದರು. ವಿಶೇಷ ಉಪನ್ಯಾಸಕರಾಗಿ ಸ್ನೇಹಶಾಲೆಯ ಅಧ್ಯಕ್ಷ ಹಾಗೂ ನಿವೃತ್ತ ಉಪನ್ಯಾಸಕರಾದ ಚಂದ್ರಶೇಖರ ದಾಮ್ಲೆಯವರು ಭಾಗವಹಿಸಿ, ಮಾತನಾಡಿ ಕನಕದಾಸರ ಕೀರ್ತನೆ, ಜೀವನದ ಮೌಲ್ಯಗಳನ್ನು ಈಗಿನ ಯುವ ಸಮೂಹ ನಮ್ಮ ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರ ಪಂಚಾಯತ್ ತಹಶೀಲ್ದಾರರಾದ ಮಂಜುನಾಥ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಬ್ಲಾಕ್ ಕಾಂಗ್ರೇಸ್ ಮಾಜಿ ಅಧ್ಯಕ್ಷರಾದ ವೆಂಕಪ್ಪ ಗೌಡ, ನ.ಪಂ ಮುಖ್ಯಾಧಿಕಾರಿ ಸುಧಾಕರ, ನ.ಪಂ ಮಾಜಿ ಅಧ್ಯಕ್ಷರಾದ ವಿನಯ್‌ಕುಮಾರ್ ಕಂದಡ್ಕ ಹಾಗೂ ನ.ಪಂ ಸದಸ್ಯರು, ಸಿಬ್ಬಂಧಿವರ್ಗ ಮೊದಲಾದವರು ಉಪಸ್ಥಿತರಿದ್ದರು.
ನಂತರ ಸುಳ್ಯ ನಾದ ಮಂಟಪ (ರಿ.) ಇವರಿಂದ ಕನಕದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮ ನಡೆಯಿತು.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!