ಸುಳ್ಯ ಪಟ್ಟಣ ಪಂಚಾಯಿತಿ ಯೋಜನಾ ಪ್ರಾಧಿಕಾರವು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರನ್ವಯ ಸುಳ್ಯ ಸ್ಥಳೀಯ ಯೋಜನಾ ಪ್ರದೇಶಕ್ಕೆ ಮಹಾಯೋಜನೆಯನ್ನು ತಯಾರಿಸಿ, ನಕ್ಷೆ ಮತ್ತು ವರದಿಯೊಂದಿಗೆ ಸರ್ಕಾರದ ತಾತ್ಕಾಲಿಕ ಅನುಮೋದನೆಗೆ ಸಲ್ಲಿಸಲಾದ ಹಿನ್ನಲೆ ಯಲ್ಲಿ ಸರ್ಕಾರ ಮಹಾಯೋಜನೆಗೆ ತಾತ್ಕಾಲಿಕವಾಗಿ ಅನುಮೋದನೆಯನ್ನು ನೀಡಿದೆ.
ತಾತ್ಕಾಲಿಕ ಅನುಮೋದಿತ ಮಹಾಯೋಜನೆ ನಕ್ಷೆ ಮತ್ತು ವರದಿಯನ್ನು ಸುಳ್ಯ ಪಟ್ಟಣ ಪಂಚಾಯತಿ ಕಚೇರಿಯಲ್ಲಿ ಸಾರ್ವಜನಿಕರ ವೀಕ್ಷಣೆಗಾಗಿ ಇಡಲಾಗಿದ್ದು, ಸಾರ್ವಜನಿಕರು ತಮ್ಮ ಸಲಹೆ/ ಆಕ್ಷೇಪಣೆಗಳು ಸೂಚನೆಗಳು ಇದ್ದಲ್ಲಿ ಕರ್ನಾಟಕ ರಾಜ್ಯ ಪತ್ರದಲ್ಲಿ ದಿನಾಂಕ : 27-11-2023 ರಂದು ಪ್ರಕಟಣೆಗೊಂಡಿದ್ದು, ರಾಜ್ಯ ಪತ್ರದಲ್ಲಿ ಪ್ರಕಟಣೆಗೊಂಡ ದಿನದಿಂದ 60 ದಿನಗಳ ಒಳಗಾಗಿ ಲಿಖಿತ ಮುಖೇನ ಖುದ್ದಾಗಿ ಅಥವಾ ನೋಂದಾಯಿತ ಅಂಚೆಯ ಮೂಲಕ ಮುಖ್ಯಾಧಿಕಾರಿ/ ಸದಸ್ಯ ಕಾರ್ಯದರ್ಶಿ ಪಟ್ಟಣ ಪಂಚಾಯತ್ ಕಾರ್ಯಾಲಯ ಸುಳ್ಯ ಇವರಿಗೆ ಸಲ್ಲಿಸುವಂತೆ ಹಾಗೂ 60 ದಿನಗಳ ನಂತರ ಯಾವುದೇ ಸಲಹೆ/ ಆಕ್ಷೇಪಣೆಗಳು/ ಸೂಚನೆಗಳನ್ನು ಸ್ವೀಕರಿಸುವುದಿಲ್ಲವೆಂದು ಸುಳ್ಯ ನಗರ ಪಂಚಾಯತ್ ಪ್ರಕಟಣೆಯಲ್ಲಿ ತಿಳಿಸಿದೆ.