ದಿನಾಂಕ 02/12/2023ನೇ ಶನಿವಾರದಂದು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಗಾಣಿಗರ ಸಮಾವೇಶಕ್ಕೆ ಸುಳ್ಯದ ಪಾಟಾಳಿಯಾನೆ ಗಾಣಿಗ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಉದ್ದಂತಡ್ಕ ಇವರನ್ನು ಕರಾವಳಿ ಜಿಲ್ಲೆಯ ವಿಶೇಷ ಅಥಿತಿ ಆಹ್ವಾನಿತರಾಗಿ ಆಹ್ವಾನಿಸಿ ಕರ್ನಾಟಕ ಘನ ಸರಕಾರದ ಮುಖ್ಯ ಮಂತ್ರಿಗಳಿರುವ ವೇದಿಕೆ ಯಲ್ಲಿ ಗುರುತಿಸಲಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯ ಗಾಣಿಗ ಸಮಾವೇಷದ ಅಧ್ಯಕ್ಷತೆಯನ್ನು ರಾಜ್ಯ ಗಾಣಿಗ ಸಂಘದ ಅಧ್ಯಕ್ಷರಾದ ಎಂ ಆರ್ ರಾಜಶೇಖರ್ ವಹಿಸಲಿದ್ದಾರೆ , ನೂತನ ಕಟ್ಟಡದ ಉದ್ಘಾಟನೆ ಮತ್ತು ಶಂಕುಸ್ಥಾಪನೆಗಳನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನಡೆಸಲಿದ್ದಾರೆ. ಅಲ್ಲದೇ ಈ ಕಾರ್ಯಕ್ರಮದಲ್ಲಿ ಸಚಿವರುಗಳು, ಸಂಸದರು, ಶಾಸಕರು ಅಲ್ಲದೇ ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಇತರ ಅಥಿತಿ ಅಭ್ಯಾಗತರು ಭಾಗವಹಿಸಲಿದ್ದು ಈ ಕಾರ್ಯಕ್ರಮಕ್ಕೆ ಸುಳ್ಯದಿಂದ ನೂರಕ್ಕು ಅಧಿಕ ಮಂದಿ ತೆರಳಲಿದ್ದಾರೆ ಎಂದು ತಿಳಿಸಿದ್ದಾರೆ .