Ad Widget

ಬಂದಡ್ಕ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಮಹಾಸಭೆ – ನೂತನ ಪದಾಧಿಕಾರಿಗಳ ಆಯ್ಕೆ : ಅಧ್ಯಕ್ಷರಾಗಿ  ಸುಭಾಶ್ಚಂದ್ರ ರೈ ತೋಟ, ಪ್ರ.ಕಾರ್ಯದರ್ಶಿಯಾಗಿ ಪುರುಷೋತ್ತಮ ಬೊಡ್ಡನಕೊಚ್ಚಿ, ಕೋಶಾಧಿಕಾರಿಯಾಗಿ ಮೋನಪ್ಪ ಗೌಡ

ಬಂದಡ್ಕ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಮಹಾಸಭೆಯು ಮೊಕ್ತೇಸರ ಬಿ.ಸದಾನಂದ ರೈ ಯವರ ಅಧ್ಯಕ್ಷತೆಯಲ್ಲಿ ನ.28 ರಂದು ದೇವಸ್ಥಾನದಆವರಣದಲ್ಲಿ ನಡೆಯಿತು.     

. . . . . . . . .

ಸಭೆಯ ಆರಂಭದಲ್ಲಿ ವಾರ್ಷಿಕ ವರದಿವಾಚನ ಮತ್ತು ಲೆಕ್ಕಪತ್ರವನ್ನು ಮಂಡಿಸಲಾಯಿತು. ಈ ಸಂದರ್ಭದಲ್ಲಿ      ಮುಂದಿನ ಎರಡು ವರ್ಷದ ಅವಧಿಗೆ  ನೂತನ ಆಡಳಿತ ಸಮಿತಿಯನ್ನು ರಚಿಸಲಾಯಿತು.
ಕ್ಷೇತ್ರದ ಮೊಕ್ತೇಸರರಾಗಿ ಬಿ. ಸದಾನಂದ ರೈ,  ಅಧ್ಯಕ್ಷ ಬಿ. ಸುಭಾಶ್ಚಂದ್ರ ರೈ ತೋಟ,  ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಬೊಡ್ಡನಕೊಚ್ಚಿ, ಕೋಶಾಧಿಕಾರಿ ಐ.ಮೋನಪ್ಪ ಗೌಡ ರವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರುಗಳನ್ನಾಗಿ ಪಿ. ಯಂ. ಭೋಜಪ್ಪ ಗೌಡ,  ಬಿ.ರವೀಂದ್ರನಾಥ್ ರೈ,ವಿ., ಸುರೇಶ್ ಕುಮಾರ್, ಬಿ. ಸದಾಶಿವ ರೈ, ಸಹಕಾರ್ಯದರ್ಶಿಗಳಾಗಿ ಯಂ. ಕೆ. ನಿತ್ಯಾನಂದ, 
ಕೆ. ರಾಧಾಕೃಷ್ಣನ್ ನಂಬಿಯಾರ್,  ಯಂ.ವೆಂಕಪ್ಪ ರೈ,    ಕಮಲಾಕ್ಷನ್  ಕೋಡೋತ್ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ನೂತನ ಆಡಳಿತ ಸಮಿತಿಯ ನೇತೃತ್ವದಲ್ಲಿ ಡಿ. 18 ರಂದು ಕ್ಷೇತ್ರದಲ್ಲಿ ವರ್ಷಂಪ್ರತಿ ನಡೆಯುವ  ಷಷ್ಠಿ ಮಹೋತ್ಸವದ  ಆಚರಣೆಯ  ಕಾರ್ಯಕ್ರಮಗಳ ರೂಪುರೇಷೆಗಳ ಕುರಿತು   ಪೂರ್ವಭಾವಿಯಾಗಿ ಚರ್ಚಿಸಲಾಯಿತು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading