ಸರಕಾರಿ ಅಧಿಕಾರಿಯೋರ್ವರು ಕಂಠಪೂರ್ತಿ ಕುಡಿದು ರಸ್ತೆಯಲ್ಲಿ ಅಡ್ಡಾದಿಡ್ಡಿ ಸರಕಾರಿ ವಾಹನವನ್ನು ಚಲಾಯಿಸಿದ್ದನ್ನು ಕಂಡ ಇತರ ವಾಹನ ಸವಾರರು ಅಡ್ಡಗಟ್ಟಿದ ಘಟನೆ ನ.28 ರಂದು ರಾತ್ರಿ ಸುಳ್ಯದ ಅರಂಬೂರಿನಲ್ಲಿ ನಡೆದಿದೆ.
ಸುಳ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಯಾಗಿರುವ ನವೀನ್ ಕುಮಾರ್ ಎಂಬವರು ಕಂಠಪೂರ್ತಿ ಕುಡಿದು ವಾಹನ ಚಲಾಯಿಸಿದ ಸರಕಾರಿ ಅಧಿಕಾರಿ. ಸಾರ್ವಜನಿಕರು ಹಾಗೂ ವಾಹನ ಸವಾರರು ಅಡ್ಡಗಟ್ಟಿದ್ದರಿಂದ ಸಂಭಾವ್ಯ ಅಪಾಯ ತಪ್ಪಿದೆ. ಇದೀಗ ಸಾರ್ವಜನಿಕರೊಂದಿಗೆ ಕ್ಷಮೆಯಾಚಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಸರಕಾರಿ ಅಧಿಕಾರಿಯೊಬ್ಬರು ಮದ್ಯಪಾನ ಮಾಡಿ ವಾಹನ ಚಲಾಯಿಸುವುದರ ಜತೆಗೆ ಸರಕಾರಿ ವಾಹನ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಪೋಲೀಸರು ಕ್ರಮ ಕೈಗೊಳ್ಳಬೇಕಿದೆ.