
ಅಜ್ಜಾವರ ಗ್ರಾಮದ ಮೇನಾಲ ವಾರ್ಡ್ ನಲ್ಲಿ ಆಯ್ಕೆಯಾಗಿದ್ದ ಗೀತಾ ಕಲ್ಲಗುಡ್ಡೆ ಎಂಬುವವರ ಪತಿ ಬಾಬು ನಾಯ್ಕ್ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಇಂದು ಮುಂಜಾನೆ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಇದನ್ನು ಗಮನಿಸಿದ ಮನೆಯವರು ಇವರನ್ನು ಆಸ್ಪತ್ರೆಗೆ ಸಾಗಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ ಮೃತ ಪಟ್ಟರು ಎಂದು ತಿಳಿದು ಬಂದಿದೆ ಆತ್ಮಹತ್ಯೆ ಕುರಿತಾಗಿ ಸುಳ್ಯ ಠಾಣೆಯಲ್ಲಿ ದೂರು ದಾಖಲಾಗಿದ್ದು ಆತ್ಮಹತ್ಯೆಗೆ ನಿಖರ ಕಾರಣಗಳು ತಿಳಿದು ಬಂದಿಲ್ಲ.