Ad Widget

ಎಸ್ಸೆಸ್ಸೆಫ್ ಕಲ್ಲುಗುಂಡಿ ಶಾಖೆ ಸಾಹಿತ್ಯೋತ್ಸವ

ಎಸ್ಸೆಸ್ಸೆಫ್ ನ್ಯಾಷನಲ್ ಸಾಹಿತ್ಯೋತ್ಸವದ ಅಂಗವಾಗಿ ನಡೆಯುವ 6 ಘಟಕಗಳ ಸ್ಪರ್ಧೆಯಲ್ಲಿ ಪ್ರಥಮ ಹಂತವಾದ ಶಾಖಾ ಮಟ್ಟದ ಸ್ಪರ್ಧೆಯು ಕಲ್ಲುಗುಂಡಿಯಲ್ಲಿ ನಡೆಯಿತು. ಕಲ್ಲುಗುಂಡಿ ಶಾಖೆ ವ್ಯಾಪ್ತಿಯ ವಿದ್ಯಾರ್ಥಿಗಳ ಕಲಾ ಪ್ರತಿಭೆಗಳನ್ನು ಹೊರತೆಗೆಯುವ ಸಾಹಿತ್ಯೋತ್ಸವ ಸ್ಪರ್ಧಾ ಕಾರ್ಯಕ್ರಮವು ದಿನಾಂಕ 25-11-2023 ರಂದು ಶಾಖಾ ಕೋಶಾಧಿಕಾರಿ ಆಶಿಕ್ ರವರ ಅಧ್ಯಕ್ಷತೆಯಲ್ಲಿ ಜರಗಿತು. SჄS ಕಲ್ಲುಗುಂಡಿ ಶಾಖೆ ಪ್ರಧಾನ ಕಾರ್ಯದರ್ಶಿ ಎ.ಎಂ.ಫೈಝಲ್ ಝುಹ್‌ರಿ ಯವರು ದುಆಃ ನೆರವೇರಿಸಿದರು. ಡಿವಿಷನ್ ಕಾರ್ಯದರ್ಶಿ ಸ್ವಾದಿಕ್ ಮಾಸ್ಟರ್ ಉದ್ಘಾಟನೆ ಮಾಡಿದರು. ಖತ್ತರ್ ಐಸಿಎಫ್ ನಾಯಕರಾದ ಅಬ್ದುಲ್ಲಾ ಸಂಪಾಜೆ, ಝುಬೈರ್ ಕೊಯನಾಡು, ಹಂಝ ಟಿಕೆ ಕೊಯನಾಡುರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಶಾಖಾ ಮಾಜಿ ಅಧ್ಯಕ್ಷರಾದ ರಂಶಾದ್, ಶಾಖಾ ಕಾರ್ಯದರ್ಶಿಗಳಾದ ಜವಾದ್ ಸಂಪಾಜೆ, ಹಸೈನ್ ಚಟ್ಟೆಕಲ್ಲು, SჄS ನಾಯಕರಾದ ಅಝೀಝ್ ಸಂಪಾಜೆ ಮೊದಲಾದವರು ಭಾಗವಹಿಸಿದರು. ನಂತರ ಬೇರೆ ಬೇರೆ ವಿಭಾಗಗಳಲ್ಲಿ ವೈವಿಧ್ಯಮಯ ಸ್ಪರ್ಧಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದರು. ಸುಳ್ಯ ಡಿವಿಷನ್ ವ್ಯಾಪ್ತಿಯಲ್ಲಿ ಯೂನಿಟ್ ಮಟ್ಟದಲ್ಲಿ ನಡೆದ ಮೊದಲ ಸಾಹಿತ್ಯೋತ್ಸವ ಇದಾಗಿದ್ದು ಉತ್ತಮ ಸ್ಪಂದನೆ ಸಾರ್ವಜನಿಕ ವಲಯದಲ್ಲಿ ಮೂಡಿ ಬಂದಿದೆ. ಕಾರ್ಯಕ್ರಮದಲ್ಲಿ ಶಾಖಾ ಪ್ರಧಾನ ಕಾರ್ಯದರ್ಶಿ ರುನೈಝ್ ಕೊಯನಾಡು ಸ್ವಾಗತಿಸಿ, ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading