ಮಂಡೆಕೋಲು ಗ್ರಾಮದ ಕುಟ್ಟಣಮೂಲೆ ಶಿವಪ್ಪ ನಾಯ್ಕ (65) ಎಂಬವರು ನ.27ರಂದು ಸಂಜೆ ಮನೆ ಸಮೀಪದ ಮರವೊಂದಕ್ಕೆ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಮನೆಯವರು ಸಂಜೆ ಸುಳ್ಯಕ್ಕೆ ಬಂದು ವಾಪಸ್ ಮನೆಗೆ ಹೋಗುವಾಗ ಶಿವಪ್ಪ ನಾಯ್ಕರು ಮನೆಯಲ್ಲಿರಲಿಲ್ಲ. ಬಳಿಕ ಮನೆ ಸಮೀಪ ನೇಣು ಹಾಕಿ ಮೃತಪಟ್ಟಿರುವುದು ಕಂಡು ಬಂತೆನ್ನಲಾಗಿದೆ. ಮೃತ ವ್ಯಕ್ತಿಯೂ ಆರೋಗ್ಯ ಸಮಸ್ಯೆಯಿಂದಾಗಿ ಕೆಲ ಕಾಲ ಬಳಲುತ್ತಿದ್ದು ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ. ಪೋಲೀಸರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದ್ದಾರೆ.
ಮೃತರು ಪತ್ನಿ ಗಿರಿಜಾ, ಮಗಳು ರಾಧಿಕ ಪದ್ಮನಾಭ ಮುಂಡೋಕಜೆ, ಮಗ ಹೇಮನಾಥ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ