ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಸಂದರ್ಭ ಎಳೆಯುವ ರಥಗಳಿಗೆ ಗೂಟ ಪೂಜಾ ಮುಹೂರ್ತ ನೆರವೇರಿತು.ಶ್ರೀ ದೇಗುಲದಲ್ಲಿ ಪೂಜೆ ನೆರವೇರಿದ ಬಳಿಕ ಜಾತ್ರಾ ಸಮಯದಲ್ಲಿ ಎಳೆಯುವ ಬ್ರಹ್ಮರಥ ಮತ್ತು ಪಂಚಮಿ ರಥಗಳನ್ನು ನಿರ್ಮಿಸಲು ಕಾರ್ತಿಕ ಹುಣ್ಣಿಮೆಯ ದಿನವಾದ ನ.೨೭ ರಂದು ಗೂಟ ಪೂಜಾ ಮುಹೂರ್ತವನ್ನು ವಿವಿಧ ವೈಧಿಕ ವಿಧಾನಗಳೊಂದಿಗೆ ಕ್ಷೇತ್ರ ಪುರೋಹಿತ ವೇದಮೂರ್ತಿ ಮಧುಸೂದನ ಕಲ್ಲೂರಾಯ ನೆರವೇರಿಸಿದರು. ಬಳಿಕ ರಥಗಳ ಗೂಟಗಳಿಗೆ ಪೂಜೆ ಮಾಡಿದರು. ಆರಂಭದಲ್ಲಿ ಬ್ರಹ್ಮರಥಕ್ಕೆ ಅಳವಡಿಸುವ ಗೂಟಗಳಿಗೆ ಪೂಜೆ ನೆರವೇರಿಸಿದರು. ಬಳಿಕ ಪಂಚಮಿ ರಥದ ಗೂಟಗಳಿಗೆ ಪೂಜೆ ನಡೆಯಿತು. ನಂತರ ಪುರೋಹಿತರು ಪೂರ್ವಶಿಷ್ಟ ಸಂಪ್ರದಾಯದಂತೆ ರಥ ಕಟ್ಟಲಿರುವ ಮೂಲನಿವಾಸಿ ಮಲೆಕುಡಿಯ ಜನಾಂಗದ ಗುರಿಕಾರರಿಗೆ ರಥ ಕಟ್ಟಲು ಪ್ರಸಾದ ರೂಪದಲ್ಲಿ ವೀಳ್ಯವನ್ನು ನೀಡಿದರು. ಅಲ್ಲದೆ ಇತರರಿಗೆ ಪ್ರಸಾದ ನೀಡಿದರು. ನಂತರ ಮೂಲನಿವಾಸಿ ಮಲೆಕುಡಿಯ ಜನಾಂಗದವರು ಬ್ರಹ್ಮರಥ ಮತ್ತು ಪಂಚಮಿ ರಥಕ್ಕೆ ಗೂಟ ನೆಡುವ ಕೈಂಕರ್ಯ ನೆರವೇರಿಸಿದರು.ಈ ಸಂದರ್ಭ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮನೋಹರ ರೈ, ವನಜಾ.ವಿ.ಭಟ್, ಶೋಭಾ ಗಿರಿಧರ್, ದೇವಳದ ಪಾಟಾಳಿ ಲೋಕೇಶ್ ಎ.ಆರ್, ಮೂಲನಿವಾಸಿ ಮಲೆಕುಡಿಯ ಜನಾಂಗದ ಗುರಿಕಾರ ಚಂದ್ರಶೇಖರ ಕೋಡಿಕಜೆ, ಹಿರಿಯರಾದ ವೇದ ಮಲೆ, ಎ.ವಿ.ನಾಗೇಶ್, ಮೋಂಟ ಮಲೆ, ಕೆಂಚ ಮಲೆ, ಶಿವಕುಮಾರ್ ಅರ್ಗುಡಿ, ತನಿಯಪ್ಪ ಕೋಡಿಕಜೆ, ನಾರಾಯಣ ಅಜ್ಜಿಹಿತ್ಲು, ಪ್ರಮುಖರಾದ ಭಾಸ್ಕರ ಅರ್ಗುಡಿ, ರೋಹಿತಾಕ್ಷ, ಜಗದೀಶ್, ದಿನಕರ, ಅಶೋಕ, ಶ್ರೇಯಸ್, ಧನುಷ್, ಸುಬ್ರಹ್ಮಣ್ಯ ಪ್ರಸಾದ್,ಪದ್ಮಯ್ಯ ಸೇರಿದಂತೆ ರಥಕಟ್ಟುವ ಮೂಲ ನಿವಾಸಿ ಮಲೆಕುಡಿಯ ಜನಾಂಗದ ೫೦ ಯುವಕರು ಮತ್ತು ಭಕ್ತರು ಉಪಸ್ಥಿತರಿದ್ದರು.
- Tuesday
- December 3rd, 2024