ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಸುಳ್ಯ ತಾಲೂಕು ಮತ್ತು ಜನಜಾಗೃತಿ ವೇದಿಕೆ ಸುಳ್ಯ ತಾಲೂಕು ಇದರ ವತಿಯಿಂದ ಈ ದಿನ ಸರಕಾರಿ ಪ್ರೌಢಶಾಲೆ ಅಜ್ಜಾವರದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ನಡೆಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಶಿವಪ್ರಕಾಶ್ ಅಡ್ಪಂಗಾಯ ರವರು ಶಾಲಾ ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯದಲ್ಲಿ ಉತ್ತಮ ಪ್ರಜೆ ಆಗುವ ಬಗ್ಗೆ ಮಾದಕ ವ್ಯಸನ ಬಲಿಯಾಗದ ರೀತಿಯಲ್ಲಿ ಮತ್ತು ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಹೇಶ್ ಕುಮಾರ್ ಮೇನಾಲ ಇವರು ಸುಧೀರ್ಘವಾಗಿ ಒಂದು ಗಂಟೆಗಳ ಕಾಲ ಶಾಲಾ ವಿದ್ಯಾರ್ಥಿಗಳಿಗೆ ಮಾದಕ ವ್ಯಸನದಿಂದ ಆಗುವ ದುಷ್ಪರಿಣಾಮ ಮತ್ತು ಮಾದಕ ವ್ಯಸನಕ್ಕೆ ಚಟಗಳಿಗೆ ಬಲಿಯಾಗುವ ರೀತಿ ಇದನ್ನು ಎದುರಿಸುವ ರೀತಿ ಶಾಲಾ ವಿದ್ಯಾರ್ಥಿಗಳು ಮುಂದಿನ ಭವಿಷ್ಯದ ಉತ್ತಮ ದಾರಿಯಲ್ಲಿ ಜೀವನ ನಡೆಸುವ ಬಗ್ಗೆ ಬಹಳ ಅದ್ಭುತವಾಗಿ ಮಾಹಿತಿಯನ್ನು ನೀಡಿರುತ್ತಾರೆ. ಈ ಸಂದರ್ಭದಲ್ಲಿ ಆಗಮಿಸಿದ ಗಣ್ಯ ವ್ಯಕ್ತಿಯವರಿಗೆ ವಲಯದ ಮೇಲ್ವಿಚಾರಕರು ವಿಶಾಲ ಕೆ. ಸ್ವಾಗತಿಸಿ ಶಾಲಾ ಮುಖ್ಯೋಪಾಧ್ಯಾಯರಾದ ಗೋಪಿನಾಥ್ ರವರು ವಂದನಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಚೈತ್ರ ಯುವತಿ ಮಂಡಳಿಯ ಅಧ್ಯಕ್ಷರಾದ ಶಶ್ಮಿ ಭಟ್ ಮತ್ತು ನಿಕಟಪೋರ್ವ ಅಧ್ಯಕ್ಷರಾದ ಪ್ರಗತಿ ಬಂದು ಸ್ವಸಹಾಯ ಸಂಘಗಳ ಅಜ್ಜಾವರ ಒಕ್ಕೂಟ ಲೀಲಾವತಿ ಮಾರ್ಗ ಸೇವಾ ಪ್ರತಿನಿಧಿಯಾದ ವೇದಾವತಿ ರಜನಿ ಶ್ರುತಿ ಸೌಮ್ಯ ಶಾಲಾ ಸಹ ಶಿಕ್ಷಕ ವೃಂದ ರವರು ಮತ್ತು 150 ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.