
ಸುಳ್ಯದ ಬಹು ನಿರೀಕ್ಷಿತ ಬೇಡಿಕೆಯಾದ 110 ಕೆ.ವಿ. ಸಬ್ ಸ್ಟೇಷನ್ ಕಾಮಗಾರಿಗೆ ಮತ್ತೆ ಚಾಲನೆ ದೊರೆತಿದ್ದು ಆರ್ಥ್ ವರ್ಕ್ ಆರಂಭಗೊಂಡಿದೆ.2023 ಜನವರಿ 10 ರಂದು ಹಿಂದಿನ ಬಿಜೆಪಿ ಸರಕಾರದ ಗುದ್ದಲಿಪೂಜೆ ಮಾಡಿ ಕೈ ತೊಳೆದುಕೊಂಡಿತ್ತು. ಈ ಸಂದರ್ಭದಲ್ಲಿ ಕೂಡ ಅರ್ಥ್ ವರ್ಕ್ ಮಾಡಲಾಗಿತ್ತು. ಇದೀಗ ನೂತನವಾಗಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಎರಡು ಪಕ್ಷಗಳಿಂದ ರಾಜಕೀಯ ಕೆಸರೆರೆಚಾಟ ಜೋರಾಗಿ ನಡೆಯುತ್ತಲೇ ಇದೆ. ಇದೀಗ ಮತ್ತೆ ಕಾಡು ತುಂಬಿದ್ದ ಜಾಗದಲ್ಲಿ ಅರ್ಥ್ ವರ್ಕ್ ಆರಂಭಗೊಂಡಿದೆ. 110 ಕೆವಿ ಕಾಮಗಾರಿ ಆರಂಭವೋ ಅಥವಾ ರಾಜಕೀಯ ಚದುರಂಗದಾಟವೋ ಕಾದು ನೋಡಬೇಕಿದೆ.