ಸುಳ್ಯ ತಾಲೂಕಿನ ಸಂಜೀವಿನಿ (NRLM) ಸಂಘಟನೆಯ ಸುಳ್ಯ ತಾಲೂಕು ಯೂನಿಯನ್ ಇತ್ತೀಚೆಗೆ ರಚನೆಗೊಂಡಿತು. ಅಧ್ಯಕ್ಷರಾಗಿ ಗೀತಾಪ್ರೇಮ್ ಬೆಳ್ಳಾರೆ (ಎಂ.ಬಿ.ಕೆ ), ಉಪಾಧ್ಯಕ್ಷರಾಗಿ ಕಾಂತಿ ಬಿ.ಎಸ್.ಸಂಪಾಜೆ (ಎಂ.ಬಿ.ಕೆ), ಕಾರ್ಯದರ್ಶಿಯಾಗಿ ಶೈಲಜಾ. ಕೆ ಮುರುಳ್ಯ (ಎಂ.ಬಿ.ಕೆ), ಜತೆ ಕಾರ್ಯದರ್ಶಿಯಾಗಿ ಭವಾನಿ ಎನ್.ಪಿ.ಮಡಪ್ಪಾಡಿ (ಎಲ್.ಸಿ.ಆರ್.ಪಿ), ಖಜಾಂಜಿಯಾಗಿ ಸೌಮ್ಯ ಜಾಲ್ಸೂರು (ಎಂಬಿಕೆ) ಆಯ್ಕೆ ಗೊಂಡರು. ಮತ್ತು 20 ಮಂದಿ ನಿರ್ದೇಶಕರುಗಳು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ತಾಲೂಕಿನ ಎಲ್ಲಾ ಎಂಬಿಕೆ ಮತ್ತು ಎಲ್.ಸಿ.ಆರ್.ಪಿಗಳು ಭಾಗವಹಿಸಿದ್ದರು.
- Saturday
- November 23rd, 2024