
ಅಪ್ಪೆ ಜಕ್ಕೆಲ್ ಯುವಕ ವೃಂದ ಕಲ್ಲುಗುಡ್ಡೆ – ನೂಜಿಬಾಳ್ತಿಲ ಇವರ ಆಶ್ರಯದಲ್ಲಿ ಕಡಬ ತಾಲೂಕು ಅಮೇಚೂರ್ ಕಬಡ್ಡಿ ಅಸೋಷಿಯೇಶನ್ ಇವರ ಮಾರ್ಗದರ್ಶನದಲ್ಲಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕಲ್ಲುಗುಡ್ಡೆ, ನೂಜಿಬಾಳ್ತಿಲದಲ್ಲಿ ನಡೆದ ನಲಿಕೆ ಸ್ವಜಾತಿ ಬಾಂಧವರ ಸೂರ್ಯ ಬೆಳಕಿನ ಪುರುಷರ ಮುಕ್ತ ಹಾಗೂ 60 ಕೆ ಜಿ ವಿಭಾಗದ ಪುರುಷರ ಹೊನಲು ಬೆಳಕಿನ ಮುಕ್ತ ಸಾಂಪ್ರದಾಯಿಕ ಮಣ್ಣಿನ ಅಂಕಣದ ಕಬಡ್ಡಿ ಪಂದ್ಯಾಟ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರವರು ಪಾಲ್ಗೊಂಡು ದೀಪ ಬೆಳಗಿಸಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.ವೇದಿಕೆಯಲ್ಲಿ ಎಸ್ ಅಂಗಾರ ಮಾಜಿ ಸಚಿವರು ಹಾಗೂ ಗುರುವ ಎಸ್, ಗಂಗಮ್ಮ, ವಿನಯ ಕುಮಾರಿ, ಸುಂದರಿ, ಜೋಸ್, ಬೇಬಿ ಮಾಥ್ಯೂ, ಜಯಂತ ಬರಮೇಲು, ಲಿಂಗಪ್ಪ ಗೌಡ, ನೀಲಮ್ಮ, ಕಾಂತಪ್ಪ ಉಪಸ್ಥಿತರಿದ್ದರು.