
ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ದೇವಸ್ಥಾನದ ಆಡಳಿತದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಪ್ರಜ್ವಲ್.ಜೆ ಅವರಿಗೆ ಡಾಕ್ಟರೇಟ್ ಪುರಸ್ಕಾರ ಲಭಿಸಿದೆ.ಎ ಕ್ರಿಟಿಕಲ್ ಸ್ಟಡಿ ಆಪ್ ಆತ್ಮ ಶರೀರ ಇಂದ್ರೀಯ ಪ್ರಾಣ ಆಂಡ್ ಅಂತರ್ಧಾನ ಯ್ಯಾಸ್ ಇಲ್ಲುಸ್ಟೆಂಟೆಡ್ ಇನ್ ವೇದಾಂತ ಫಿಲೋಸಫಿ ಇನ್ ದಿ ಲೈಟ್ ಆಪ್ ಯೋಗ ಆಂಡ್ ಆಯುರ್ವೇದ ಎಂಬ ಮಹಾಪ್ರಬಂದಕ್ಕೆ ಕೇಂದ್ರೀಯ ಸಂಸ್ಕೃತ ವಿಶ್ವ ವಿದ್ಯಾನಿಲಯವು ಪಿಎಚ್‌ಡಿ ಪದವಿ ನೀಡಿದೆ.ಡಾ.ಪ್ರಜ್ವಲ್ ಅವರು ಡಾ.ಗಣೇಶ್ ಈಶ್ವರ ಭಟ್ ಮಾರ್ಗದರ್ಶನದಲ್ಲಿ ಮಹಾಪ್ರಬಂದ ಮಂಡಿಸಿದ್ದರು.ಇವರು ನಿಡ್ಲೆ ಗ್ರಾಮದ ಬರೆಂಗಾಯ ಕಜೆ ಮನೆಯ ಜನಾರ್ಧನ ಗೌಡ ಮತ್ತು ವೇದಾವತಿ ದಂಪತಿಗಳ ಪುತ್ರ.
