ಶಾಲಾ ಶಿಕ್ಷಣ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು ಸುಳ್ಯ ತಾಲೂಕು, ಹಿರಿಯ ವಿದ್ಯಾರ್ಥಿ ಸಂಘ, ಊರ ವಿದ್ಯಾ ಅಭಿಮಾನಿಗಳ ಸಹಭಾಗಿತ್ವದಲ್ಲಿ ನ.19ರಂದು ಕ್ರೀಡೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಆರಂಭದಲ್ಲಿ ಶಾಲಾ ಧ್ವಜಾರೋಹಣವನ್ನು ಚಂದ್ರಶೇಖರ್ ಮಾವಿನಕಟ್ಟೆ, ಅಧ್ಯಕ್ಷರು ವ್ಯವಸ್ಥಾಪನ ಸಮಿತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮರಕತ ಇವರು ನಡೆಸಿಕೊಟ್ಟರು. ನಂತರ ಸಭಾ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಶ್ರೀ ಚಂದ್ರಶೇಖರ ಪಾರಪ್ಪಾ ಡಿ, ಮುಖ್ಯ ಗುರುಗಳು ಗುಲಾಬಿಯೊಂದಿಗೆ ಸರ್ವರನ್ನು ಸ್ವಾಗತಿಸಿ. ಪ್ರಾಸ್ತಾವಿಕ ಮಾತನಾಡಿದರು . ಕೆ ರಾಮಚಂದ್ರ ಭಟ್ ಶಿವ ಸದನ ನಡುಗಲ್ಲು ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀಮತಿ ಉಮೇಶ್ವರಿ ನೆಲ್ಲಿಪುಣಿ ಅಧ್ಯಕ್ಷರು ಎಸ್‌ಡಿಎಂಸಿ ನಡುಗಲ್ಲು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಸುಬ್ರಹ್ಮಣ್ಯ ಅತ್ಯಾಡಿ ಆಂಗ್ಲ ಭಾಷಾ ಉಪನ್ಯಾಸಕರು ಕುಮಾರಸ್ವಾಮಿ ವಿದ್ಯಾಲಯ ಸುಬ್ರಮಣ್ಯ, ಶ್ರೀಮತಿ ನಳಿನಿ ಶಿಕ್ಷಣ ಸಂಯೋಜಕರು ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ ಇವರುಗಳು ಸಂದರ್ಭೋಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ವಿಜಯ್ ಕುಮಾರ್ ಚಾರ್ಮತ ಸದಸ್ಯರು ಗ್ರಾಮ ಪಂಚಾಯತ್ ಗುತ್ತಿಗಾರು, ಹರೀಶ್ ಕೊಯಿಲ ಸದಸ್ಯರು ಗ್ರಾಮ ಪಂಚಾಯತ್ ಗುತ್ತಿಗಾರು ಹಾಗೂ ಅಧ್ಯಕ್ಷರು ವಾರ್ಷಿಕೋತ್ಸವ ಸಮಿತಿ ನಡುಗಲ್ಲು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶ್ರೀಮತಿ ಪ್ರಮೀಳಾ ಯರ್ದಡ್ಕ ಗ್ರಾಮ ಪಂಚಾಯತ್ ಸದಸ್ಯರು ಗುತ್ತಿಗಾರು, ಶ್ರೀಮತಿ ಲೀಲಾವತಿ ಅಂಜೇರಿ ಸದಸ್ಯರು ಗ್ರಾಮ ಪಂಚಾಯತ್ ಗುತ್ತಿಗಾರು ,ಮಾಸ್ಟರ್ ಕೌಶಿಕ್ ಎನ್. ಕೆ. ಶಾಲಾ ವಿದ್ಯಾರ್ಥಿ ನಾಯಕ ಉಪಸ್ಥಿತರಿದ್ದ ರು ಕಾರ್ಯಕ್ರಮದ ಅಂಗವಾಗಿ ಪುರುಷರಿಗೆ, ಕಬ್ಬಡ್ಡಿ, ಗೋಣಿಚೀಲ ಓಟ, ಹಗ್ಗ ಜಗ್ಗಾಟ, ಕ್ರಿಕೆಟ್. ಮಹಿಳೆಯರಿಗೆ ಲಗೋರಿ, ಡಾ ಜ್‌ಬಾಲ್, ನಿಂಬೆ ಚಮಚ, ಲಕ್ಕಿ ಗೇಮ್,ಹಗ್ಗ ಜಗ್ಗಾಟ ಸ್ಪರ್ಧೆಗಳನ್ನು ಹಮ್ಮಿಕೊಂಡಿದ್ದು ಸ್ಪರ್ಧೆಯಲ್ಲಿ ಹಿರಿಯರು ಕಿರಿಯರೆ ಲ್ಲ ರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು ಸ್ಪರ್ಧಾ ನಿರ್ಣಾಯಕರಾಗಿ ಶಿವಕುಮಾರ್ ಮರಕತ, ಕಿಶೋರ್ ಅಂಬೆ ಕಲ್ಲು ಸಹಕರಿಸಿದರು. ಈ ದಿನದ ಕಾರ್ಯಕ್ರಮದ ನಿರ್ವಹಣೆಯನ್ನು ಶ್ರೀಮತಿ ವನಜಾಕ್ಷಿ ಸಹ ಶಿಕ್ಷಕಿ ನಿರ್ವಹಿಸಿದರೆ, ಕುಮಾರಿ ಸುಧಾರಾಣಿ ಪದವೀಧರ ಶಿಕ್ಷಕಿ ಸರ್ವರಿಗೂ ವಂದನೆಗಳನ್ನು ಸಲ್ಲಿಸಿದರು
- Sunday
- November 24th, 2024