ಸುಳ್ಯದ ಅಟೋ ಚಾಲಕನೋರ್ವ ದಿನಾಕಂಕ 19-11-3023ರಂದು ಬಾಡಿಗೆ ಮಾಡಲು ಸುಳ್ಯಕ್ಕೆ ತೆರಳುವುದಾಗಿ ತಿಳಿಸಿ ತೆರಳಿದ ಜಗನ್ನಾಥ್ ಎಂ ಹೆಚ್ ರವರು ತಮ್ಮ ಮೊಬೈಲನ್ನು ಸ್ವಿಚ್ ಆಫ್ ಮಾಡಿ ತಮ್ಮ ರಿಕ್ಷವನ್ನು ಮೀನು ಮಾರುಕಟ್ಟೆ ಬಳಿಯಲ್ಲಿ ಇರಿಸಿ ನಾಪತ್ತೆಯಾಗಿದ್ದರು. ಈ ಕುರಿತು ಅವರ ಪತ್ನಿ ಪ್ರಮೀಳಾ ರವರು ಸುಳ್ಯ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿ ಹುಡುಕಾಟ ಆರಂಬಿಸಿದ್ದರು. ಇತ್ತ ದಿನಾಂಕ 21ರಂದು ಜಗನ್ನಾಥ್ ಎಂ ಹೆಚ್ ರವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿ ದರುಶನ ಪಡೆದು ಮರಳಿ ಮನೆಗೆ ಆಗಮಿಸಿದ್ದರು. ಠಾಣೆಗೆ ಮನೆಯವರ ಜೊತೆಗೆ ಆಗಮಿಸಿದ್ದರಿಂದ ಪ್ರಕರಣ ಸುಖಾಂತ್ಯವಾಗಿದೆ.
- Tuesday
- May 20th, 2025