ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ ಸುಳ್ಯ ತಾಲೂಕು ಮಟ್ಟದ ಭಾಷಾ ಶಿಕ್ಷಕರುಗಳ ಸಮಾಲೋಚನಾ ಸಭೆ ಬುಧವಾರ ನಡೆಯಿತು.ಕಾರ್ಯಕ್ರಮ ವನ್ನು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಹಾಗೂ ನಿವೃತ್ತ ಸೇನಾಧಿಕಾರಿ ದೇರಣ್ಣ ಗೌಡ. ಎ ದೀಪಬೆಳಗಿಸಿ ಉದ್ಘಾಟಿಸಿದರು.ಅತಿಥಿಗಳಾದ ಶಿಕ್ಷಣ ಸಂಯೋಜಕಿ ನಳಿನಿ ಪುರುಷೋತ್ತಮ ಕಿರ್ಲಾಯ ಪ್ರಾಸ್ತಾವಿಕ ಮಾತನಾಡಿದರು.ಶಿಕ್ಷಣ ಸಂಯೋಜಕಿ ಸಂಧ್ಯಾ ಕುಮಾರಿ, ಬಿ.ಆರ್.ಪಿ ರಮ್ಯ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಅಬ್ದುಲ್ ಖಾದರ್, ಸುಳ್ಯ ತಾಲೂಕು ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ, ಸಂಘದ ಪ್ರಧಾನ ಕಾರ್ಯದರ್ಶಿ ಚಿನ್ನಪ್ಪ ಗೌಡ ವೇದಿಕೆಯಲ್ಲಿ ಇದ್ದರು. ಶಾಲಾ ಮುಖ್ಯ ಶಿಕ್ಷಕಿ ಜಯಲತಾ ಕೆ.ಆರ್ ಸ್ವಾಗತಿಸಿ, ಶಿಕ್ಷಕಿ ಮೀನಕುಮಾರಿ ವಂದಿಸಿದರು. ಶಿಕ್ಷಕ ಶಿವಪ್ರಕಾಶ್ ಕುದ್ಪಾಜೆ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ತಾಲೂಕಿನ ಭಾಷಾ ಶಿಕ್ಷಕರು ಭಾಗವಹಿಸಿದರು.
- Tuesday
- December 3rd, 2024