ಕರಾವಳಿ ಜಿಲ್ಲೆಯಾದ್ಯಂತ ಇದೀಗ ಮರಳು ಗಣನೀಯವಾಗಿ ಇಳಿಕೆಯಾಗಿದ್ದು ಸುಳ್ಯದಲ್ಲಿ ಖಡಕ್ ಅಧಿಕಾರಿ ಆಗಮನ ಬೆನ್ನಲ್ಲೆ ಎಲ್ಲಾ ಅಕ್ರಮ ಮರಳು ಮಾರಾಟಗಾರರು ಗಪ್ ಚುಪ್ ಆಗಿದ್ದಾರೆ ಆದರೆ ಬೆರಳೆಣಿಕೆಯ ಕೆಲವರು ಮಾತ್ರ ಯಾರದೋ ಕೃಪಾ ಕಟಾಕ್ಷದೊಂದಿಗೆ ಅಕ್ರಮ ಮರಳು ಸಾಗಾಣೆ ಮಾಡುತ್ತಿದ್ದದನ್ನು ಪೋಲಿಸ್ ಹಾಗೂ ಗಣಿ ಇಲಾಖೆಯು ಫೈನ್ ಹಾಕಿದ ಪ್ರಸಂಗ ಬೆಳಕಿಗೆ ಬಂದಿದೆ.
ಎಲ್ಲೆಲ್ಲಿ ನಡೆಯುತ್ತಿದೆ ಗೊತ್ತಾ ಅಕ್ರಮ ಮರಳು ಗಣಿಗಾರಿಕೆ ?.
ಸುಳ್ಯದ ಆಲೆಟ್ಟಿ ಗ್ರಾಮದ ಒಂದು ಭಾಗದಲ್ಲಿ ಹಾಗೂ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಪೆರಾಜೆ ಗ್ರಾಮದಲ್ಲೂ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ಎರಡು ಲಾರಿಗಳಲ್ಲಿ ಅಕ್ರಮವಾಗಿ ಮರಳು ಸಾಗಿಸುವ ಬಗ್ಗೆ ಮಾಹಿತಿ ಪಡೆದ ಸುಳ್ಯ ಪೋಲಿಸ್ ಇನ್ಪೆಕ್ಟರ್ ಈರಯ್ಯ ದಂತೂರು ನೇತೃತ್ವದ ತಂಡವು ಕೆಲ ದಿನಗಳ ಹಿಂದೆ ಅಕ್ರಮ ಮರಳುಗಾರರನ್ನು ಹಿಡಿದು ಗಣಿ ಇಲಾಖೆಗೆ ಒಪ್ಪಿಸಿ 40 ಸಾವಿರ ದಂಡ ವಿಧಿಸಿದೆ ತಿಳಿದು ಬಂದಿದೆ. ಜಾಲ್ಸೂರು ಗ್ರಾಮದಲ್ಲಿ ನಡೆಯುವ ಅಕ್ರಮ ಗಣಿಗಾರಿಕಾ ಸ್ಥಳಕ್ಕೆ ಖುದ್ದಾಗಿ ಗಣಿ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿರುವುದಾಗಿ ಹೇಳಲಾಗುತ್ತಿದ್ದು ಇಂತಹ ಖಡಕ್ ಅಧಿಕಾರಿ ನೇತೃತ್ವದ ತಂಡವು ಅಕ್ರಮಗಳನ್ನು ತಡೆಯುತ್ತಿದ್ದರೂ ಬೆರಳೆಣಿಕೆಯ ಕೆಲವರು ಅಕ್ರಮ ಮರಳು ಸಾಗಾಟ ನಡೆಸುತ್ತಿದ್ದು ಇವರಿಗೆ ಸಹಾಯ ಮಾಡುತ್ತಿರುವುದು ದೊಡ್ಡವರು ಎಂದು ಜನತೆ ಆಡಿಕೊಳ್ಳುತ್ತಿದ್ದು,ಆ ದೊಡ್ಡವರು ಯಾರು ಎಂಬುವುದು ಯಕ್ಷ ಪ್ರಶ್ನೆಯಾಗಿದೆ. ಈ ಕುರಿತು ಇನ್ನಾದರೂ ಗಣಿ ಇಲಾಖೆಯು ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಕೈಗೊಂಡಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ ದುಪ್ಪಟ್ಟು ಹಣಕ್ಕೆ ಮಾರುವುದನ್ನು ತಡೆಯಬಹುದಾಗಿದೆ. ಸರಕಾರ ಎಚ್ಚೆತ್ತು ಕಠಿಣ ಕಾನೂನು ಕ್ರಮ ಕೈಗೊಳ್ಳಲಿ ಎನ್ನುವುದು ನಮ್ಮ ಆಶಯವಾಗಿದೆ.