ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮವು “ಅರಿವು ಕೇಂದ್ರ” ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಅಜ್ಜಾವರದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟಣೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಬೇಬಿ ಕಲ್ತಡ್ಕ ನೆರವೇರಿಸಿದರು.ಗ್ರಂಥಾಲಯದಲ್ಲಿ ಪುಸ್ತಕ ಪ್ರದರ್ಶನ ಮಾಡಲಾಗಿತ್ತು. ಪಂಚಾಯತ್ ಸದಸ್ಯರಾದ ಲೀಲಾಮನಮೋಹನ್ “ಗ್ರಂಥಾಲಯದ ಮಹತ್ವದ” ಬಗ್ಗೆ ಗ್ರಂಥಾಲಯದ “ಓದುವ ಬೆಳಕು “ಮಕ್ಕಳಿಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಮಾಲ ಎ ಕೆ ,ಪಂಚಾಯತ್ ಸದಸ್ಯರಾದ ಅಬ್ದುಲ್ಲ ಎ, ಗ್ರಂಥಾಲಯ ಸಮಿತಿ ಸದಸ್ಯೆ ಶಶ್ಮಿ ಭಟ್ ಅಜ್ಜಾವರ,ಗ್ರಂಥಾಲಯ ಮೇಲ್ವಿಚಾರಕಿ ಕು.ಲಕ್ಷ್ಮಿ,ಪಂಚಾಯತ್ ಸಿಬ್ಬಂದಿಗಳು ಮತ್ತಿತರ ಉಪಸ್ಥಿತರಿದ್ದರು.