ಪುತ್ತೂರು ವಿಭಾಗೀಯ ಅಧಿಕಾರಿಗಳ ಆಡಳಿತಕ್ಕೆ ಒಳಪಡುವ ಸುಳ್ಯದ ಓರ್ವ ಮತ್ತು ಪುತ್ತೂರಿನ ನಾಲ್ವರು ಸೇರಿ ಒಟ್ಟು ಐವರು ಕಾರ್ಯಕರ್ತರನ್ನು ಗಡಿಪಾರಿಗೆ ನೋಟಿಸ್ ನೀಡಿದ ಕುರಿತಾಗಿ ಇಂದು ಸುಳ್ಯ ತಾಲ್ಲೂಕು ಕಛೇರಿ ಮುಂಬಾಗಲ್ಲಿ ಸರಕಾರದ ನೀತಿ ಖಂಡಿಸಿ ಪ್ರತಿಭಟನೆ ನಡೆಯಿಯತು . ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತಾನಡುತ್ತಾ ಇದೀಗ ಪೋಲಿಸ್ ಇಲಾಖೆಯು ಬಿರಿಯಾನಿ ತಿಂದು ಮಲಗುತ್ತಿದ್ದಾರೆ ಅಲ್ಲದೇ ಈ ಹಿಂದೆ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಕೊಲೆ ನಡೆದಾಗ ಅವರನ್ನು ಕೊಂದವರು ಯಾರು ಎಂದು ಕೇಳಿದರು, ಅಲ್ಲದೇ ಪೋಲಿಸ್ ಇಲಾಖಾ ಅಧಿಕಾರಿಗಳು ಗಾಂಧಿನಗರದ ಹಲಾಲ್ ಬಿರಿಯಾನಿ ತಿಂದು ನಾವು ಗೋವು ಹೋಗುತ್ತಿದೆ ಎಂದು ಹೇಳಿದಲ್ಲಿ ಆ ವಾಹನ ಹೋದ ಬಳಿಕ ಮತ್ತೆ ನಮಗೆ ಕರೆ ಮಾಡಿ ಎಲ್ಲಿ ಹೋಗುತ್ತಿದೆ ಎಂದು ಆಕಾಶಕ್ಕೆ ಲೈಟ್ ಹಿಡಿಯುತ್ತಾರೆ ಎಂದು ಪೋಲಿಸ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು . ಅಲ್ಲದೇ ನೀವು ಸರಕಾರಿ ಅಧಿಕಾರಿಗಳು ಆಗಿರಬಹುದು ನೀವು ನಿವೃತ್ತಿ ಬಳಿಕ ಇದೇ ಸಮಾಜದಲ್ಲಿ ಬದುಕಬೇಕು ಆಗ ನಿಮಗೆ ಬೇಕಾಗುವುದು ಇದೇ ಪರಿವಾರ ಸಂಘಟನೆಗಳು ಎಂದು ಹೇಳಿದರು.
- Thursday
- November 21st, 2024