
ಸುಳ್ಯ ಶಾಮಿಯಾನ ಹಾಗೂ ಧ್ವನಿ ಬೆಳಕು ಸಂಘದ ಆಶ್ರಯದಲ್ಲಿ ಜರುಗುತ್ತಿರುವ ರಾಷ್ಟ್ರೀಯ ಕಬಡ್ಡಿ ಪಂದ್ಯಾಟದಲ್ಲಿ ಮಹಿಳಾ ವಿಭಾಗದಲ್ಲಿ ಟಿಎಂಸಿ ಥಾಣೆ ಮತ್ತು ನ್ಯಾಷನಲ್ ಬೆಂಗಳೂರು ಮಧ್ಯೆ ನಡೆದ ಹಣಾಹಣಿಯಲ್ಲಿ 37, 35ರ ಅಂಕಗಳ ಹಂಚಿಕೆಯೊಂದಿಗೆ ಟಿಎಂಸಿ ಥಾಣೆ ಗೆಲುವು ಪ್ರಶಸ್ತಿಯನ್ನು ಪಡೆದುಕೊಂಡಿತು. ದ್ವಿತೀಯ ಬಹುಮಾನವನ್ನು ನ್ಯಾಷನಲ್ ಬೆಂಗಳೂರು ಪಡೆದುಕೊಂಡಿತು. ಹಾಗೂ ತೃತೀಯ ಬಹುಮಾನವನ್ನು ಕನ್ಯಾಕುಮಾರಿ ಹಾಗೂ ಪಾಂಡಿಚೇರಿಯು ಚತುರ್ಥ ಬಹುಮಾನ ವನ್ನು ಪಡೆದುಕೊಂಡರು. ಆಲ್ ರೌಂಡರ್ ಆಗಿ ಮಾಧುರಿ ಟಿಎಂಸಿ ಥಾಣೆ , ಲಕ್ಷ್ಮಿ ಬೆಂಗಳೂರು ಬೆಸ್ಟ್ ರೈಡರ್ , ಕ್ಯಾಚರ್ ಆಗಿ ಬೃಂದಾ ಇವರು ವೈಯಕ್ತಿಕ ಪ್ರಶಸ್ತಿಯನ್ನು ಪಡೆದುಕೊಂಡರು .
