ಗ್ರಾಮ ಪಂಚಾಯತ್ ದೇವಚಳ್ಳ, ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಮತ್ತು ಮಂಗಳ ಕಲಾ ಸಾಹಿತ್ಯ ವೇದಿಕೆ ಪಟ್ಟೆ ಬಡಗನ್ನೂರು ಘಟಕ ಪುತ್ತೂರು, ಯಶಸ್ವಿ ನಾಗರಿಕ ಸೇವಾ ಸಂಘ ವಾಸುದೇವ ನಗರ, ಕಾರ್ಕಳ ಉಡುಪಿ ಇದರ ಸಂಯುಕ್ತ ಆಶ್ರಯದಲ್ಲಿ “ಪಂಚಧ್ವನಿ” ಕಾರ್ಯಕ್ರಮ 2023 ಕಾರ್ಯಕ್ರಮ ನ.18ರಂದು ನಡೆಯಿತು. ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಗ್ರಂಥಾಲಯ ಸಪ್ತಾಹ, ಸದಸ್ಯತ್ವ ಆಂದೋಲನ, ಮಕ್ಕಳ ಸ್ನೇಹಿ ಗ್ರಂಥಾಲಯ, ಓದುಗರ ಸಮಾವೇಶ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಪಡುಮಲೆ ಯಶಸ್ವಿ ಸಾಧನಾಶ್ರೀ ಪ್ರಶಸ್ತಿ 2023 ಪ್ರಧಾನ ಕಾರ್ಯಕ್ರಮ ನಡೆಯಿತು.
ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದ ಉದ್ಘಾಟನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ನೆರವೇರಿಸಿ ಮಾತನಾಡಿದರು. ಓದುವ ಹವ್ಯಾಸ ಬೆಳೆಸಿಕೊಳ್ಳುವುದರಿಂದ ಜೀವನದಲ್ಲಿ ಬದಲಾವಣೆಗೊಂಡು ಉತ್ತಮನಾಗಲು ಸಾಧ್ಯವಿದೆ ಎಂದರು.
ಪ್ರಶಸ್ತಿ ಪ್ರಧಾನ ಸಮಾರಂಭದ ಉದ್ಘಾಟನೆಯನ್ನು ತಾ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ನೆರವೇರಿಸಿದರು. ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಹಾಗೂ ಸಾಧಕರಿಗೆ ಪಡುಮಲೆ ಯಶಸ್ವಿ ಸಾಧನಾಶ್ರೀ ಪ್ರಶಸ್ತಿ ಪ್ರಧಾನ ನಡೆಯಿತು. ಕೃಷಿ ಕ್ಷೇತ್ರದ ಸಾಧನೆಗೆ ವಸಂತ ಬೊಳ್ಳಾಜೆ, ಮಾಧ್ಯಮ ಕ್ಷೇತ್ರದ ಸೇವೆಗೆ ಮುರಳೀಧರ ಅಡ್ಡನಪಾರೆ, ಶಿಕ್ಷಣ ಕ್ಷೇತ್ರದ ಸೇವೆಗೆ ತಿರುಮಲೇಶ್ವರಿ ಯು.ಎಸ್., ನಾಟಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿರುವ ಸೀತಾರತ್ನ ಡಿ., ಉತ್ತಮ ಗ್ರಂಥಾಲಯ ಮೇಲ್ವಿಚಾರಕಿಯಾಗಿರುವ ಲೀಲಾವತಿ ಕೆ., ಸಮಾಜ ಸೇವೆಗೆ ಹೆಜ್ಜೆಇರಿಸಿರುವ ಮುಖೇಶ್ ಪಡ್ಪು, ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕುಸುಮಾವತಿ ಬಿ.ಎಚ್., ಆಶಾ ಕಾರ್ಯಕರ್ತೆಯಾಗಿ ಶ್ರಮಿಸುತ್ತಿರುವ ಪ್ರಮೀಳ ಕೆ., ಯಕ್ಷಗಾನ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗೆ ರಾಮಚಂದ್ರ ಕೆ., ಅಂಗನವಾಡಿ ಕಾರ್ಯಕರ್ತೆ ರತ್ನಾವತಿ ಬಿ. ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಚಿರಾಯು ಆಟ್ಸ್ & ಸ್ಪೋಟ್ಸ್ ಕ್ಲಬ್ ಅಧ್ಯಕ್ಷರನ್ನು ಗಣ್ಯ ಅತಿಥಿಗಳು ಸನ್ಮಾನಿಸಿ, ಪ್ರಶಸ್ತಿ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಗ್ರಾ.ಪಂ.ಸದಸ್ಯರ ತಾಲೂಕು ಒಕ್ಕೂಟದ ಕಾರ್ಯದರ್ಶಿ ಕೇಶವ ಅಡ್ತಲೆ, ಸಂಜೀವಿನಿ ಒಕ್ಕೂಟ ಸುಳ್ಯ ತಾಲೂಕು ಇದರ ಶ್ರೀಮತಿ ಶ್ವೇತಾ, ಗ್ರಂಥಾಲಯ ಮೇಲ್ವಿಚಾರಕಾರಾದ ಶ್ರೀಮತಿ ಸಾವಿತ್ರಿ ಕಣೆಮರಡ್ಕ, ಶ್ರೀಮತಿ ಅಭಿಲಾಷ, ತಾ.ಪಂ. ಮಾಜಿ ಸದಸ್ಯೆ ಯಶೋಧ ಬಾಳೆಗುಡ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದೇವಚಳ್ಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಮತ್ತು ಪ್ರಾಥಮಿಕ ಶಾಲಾ ಮಕ್ಕಳಿಗೆ ಏರ್ಪಡಿಸಿದ್ದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ರಮೇಶ್ ಪಡ್ಪು ಸ್ವಾಗತಿಸಿ, ಕಾರ್ಯಕ್ರಮ ಸಂಘಟಕರಾದ ಕಾರ್ಕಳ ವಾಸುದೇವನಗರದ ಯಶಸ್ವಿ ನಾಗರಿಕಾ ಸೇವಾ ಸಂಘಧ ಮುರಳೀಧರ ನಿರೂಪಿಸಿದರು. ದೇವಚಳ್ಳ ಗ್ರಂಥಾಲಯ ಮೇಲ್ಚಿಚಾರಕಿ ಪ್ರಫುಲ್ಲ ಶ್ರೀಕಾಂತ್ ಪಾರೆಪ್ಪಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪಿಡಿಓ ಗುರುಪ್ರಸಾದ್ ವಂದಿಸಿದರು.