
ಕೋಡಂಕೇರಿ ಕೊರಗಜ್ಜನ ಸಾನಿಧ್ಯದಲ್ಲಿ ಕೋಡಂಕೇರಿದ ಜಾಲ ಕಾರ್ಣಿಕ ಎಂಬ ತುಳು ಭಕ್ತಿ ಗೀತೆಯನ್ನು ವಿಶ್ವ ಹಿಂದೂ ಪರಿಷತ್ ಭಜರಂಗದಳ ಸುಳ್ಯ ಪ್ರಖಂಡದ ಅಧ್ಯಕ್ಷರಾದ ಸೋಮಶೇಖರ್ ಪೈಕ ಕೊರಗಜ್ಜನ ಸಾನಿಧ್ಯದಲ್ಲಿ ಬಿಡುಗಡೆ ಗೊಳಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷರು ಆದ ಕೇಶವ ಅಡ್ತಲೆ ವಹಿಸಿದ್ದರು, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲೀಲಾವತಿ ಕೋಡಂಕೇರಿ ದೈವಸ್ಥಾನದ ಮುಕ್ತೇಸರದಾರ ವಾರಿಜ ಕೋಡಂಕೇರಿ, ಗುರುವಪ್ಪ ಹಾಗೂ ದ್ವನಿ ಸುರುಳಿಯ ಗಾಯಕರಾದ ವರ್ಷಿತಾ ಸುಳ್ಯ ಹಾಗೂ ವಿನಯ್ ಕುಂಬ್ರ ಉಪಸ್ಥಿತರಿದ್ದರು ಅಲ್ಲದೆ ಎಲ್ಲಾ ಕೊರಗಜ್ಜನ ಭಕ್ತಾದಿಗಳ ಸಂಮ್ಮುಖದಲ್ಲಿ ದ್ವನಿ ಸುರುಳಿ ಬಿಡುಗಡೆ ಮಾಡಲಾಯಿತು ನಂತರ ಸಂಕ್ರಮಣದ ಅಗೆಲು ಸೇವೆ ನಡೆದು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು
