ಪೋಡಿ (ಪ್ಲಾಟಿಂಗ್) ಬಾಕಿ ಪ್ರಕ್ರಿಯೆಯ, ಅರಣ್ಯದಂಚಿನ ನಿವಾಸಿಗಳ ವಸತಿ ಹಕ್ಕು ಪತ್ರ ಕೋವಿ ನವೀಕರಣ ಮತ್ತು ಹೊಸ ಆಯುಧ ಪರವಾನಿಗೆ ಬಗ್ಗೆ ನವೆಂಬರ್ ೨೩ನೇ ಗುರುವಾರ ಬೆಳಗ್ಗೆ ೧೧.೦೦ ಗಂಟೆಗೆ ಸುಳ್ಯದ ಎಪಿಎಂಸಿ ಸಭಾಂಗಣದಲ್ಲಿ ಸಭೆ ಸೇರಿ ಚರ್ಚಿಸಲಾಗುವುದು ಎಂದು ನ್ಯಾಯವಾದಿ ಪ್ರದೀಪ್ ಕುಮಾರ್ ಕೆ.ಎಲ್‌ರವರು ನ.೧೮ರಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ
ಅಕ್ರಮ ಸಕ್ರಮ ಹಾಗೂ ವಿವಿಧ ರೀತಿಯಲ್ಲಿ ತಮ್ಮ ಜಮೀನಿನ ಪೋಡಿ ಪ್ರಕ್ರಿಯೆಗಳು ಹಲವಾರು ವರ್ಷಗಳಿಂದ ವಿಳಂಬವಾಗಿದ್ದು ಅವುಗಳನ್ನು ಕಂದಾಯ ಕಾಯ್ದೆಯಂತೆ ಪರಿಹರಿಸಿಕೊಳ್ಳಲು ಕ್ರಮ ತೆಗೆದುಕೊಳ್ಳಬೇಕು. ಅರಣ್ಯದಂಚಿನ ನಿವಾಸಿಗಳ ವಸತಿ ಹಾಗೂ ಇನ್ನಿತರ ಕಾನೂನುಬದ್ಧ ಹಕ್ಕುಗಳನ್ನು ಅರಣ್ಯ ಹಕ್ಕು ಕಾಯ್ದೆಯಂತೆ ವಿಲೇವಾರಿ ಮಾಡಬೇಕು. ಕೋವಿ ಹೊಂದಿರುವ ನಾಗರಿಕರು ಎದುರಿಸುತ್ತಿರುವ ಸಮಸ್ಯೆ ಭಾರತೀಯ ಆಯುಧ ಕಾಯ್ದೆಯಂತೆ ಇತ್ಯರ್ಥ ಕಾರ್ಯ. ಕೃಷಿ ಬೆಳೆಗಾರರು ಆಹಾರ, ಹಣ್ಣು, ವಾಣಿಜ್ಯ ಬೆಳೆ. ಸಸಿಗಳ ಆಯ್ಕೆಯ ಗುಣಮಟ್ಟ, ಜಾಹಿರಾತಿನ ಗೊಬ್ಬರ ಮತ್ತು ಔಷಧಿಗಳು ಹಾಗೂ ಮಾರುಕಟ್ಟೆ ವ್ಯವಸ್ಥೆ ಇತ್ಯಾದಿ ಒಟ್ಟು ಕೃಷಿ ನಿರ್ವಹಣೆಯಲ್ಲಿ ಆರ್ಥಿಕ ಏರುಪೇರಿನ ಸಂಕಷ್ಟಗಳಿಗೆ ಒಳಗಾಗುವ ಪರಿಸ್ಥಿತಿಯಲ್ಲಿ ಮುಂದಿನ ಕನಿಷ್ಟ ಹತ್ತು ವರ್ಷಗಳ ಅವಧಿಗೆ ಪೂರಕ ನುರಿತ ತಜ್ಞರ, ರೈತರ ಪ್ರಾಯೋಗಿಕ ಅನುಭವ ಪಡೆಯುವ ಸಮಗ್ರ ಕೃಷಿಯ ಬಗ್ಗೆ ಸಮಾಲೋಚನೆ ಮೊದಲಾದ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಗುವುದು ಎಂದು ಹೇಳಿದರು. ತಾಲೂಕಿನ ನಾಗರಿಕರು ತಮಗೆ ಸಂಬಂಧಿಸಿದ ಸಮಸ್ಯೆ ಹಾಗೂ ದಾಖಲೆಯ ವಿವರಗಳೊಂದಿಗೆ ಒಕ್ಕೊರಲಿನಿಂದ ಕಾನೂನು ಪ್ರಕಾರ ಎಲ್ಲಾ ಇಲಾಖೆಗಳಿಂದ ಸಕಾರಣ ವಿಳಂಬವಿಲ್ಲದೆ ದಾಖಲೀಕರಣಗೊಳಿಸಬಹುದು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಅಶೋಕ್ ಎಡಮಲೆಯವರು ಉಪಸ್ಥಿತರಿದ್ದರು.
- Saturday
- November 23rd, 2024