ಪುತ್ತೂರು ವಿಭಾಗೀಯ ಅಧಿಕಾರಿಗಳ ಆಡಳಿತಕ್ಕೆ ಒಳಪಡುವ ಸುಳ್ಯದ ಓರ್ವ ಮತ್ತು ಪುತ್ತೂರಿನ ನಾಲ್ವರು ಸೇರಿ ಒಟ್ಟು ಐವರು ಕಾರ್ಯಕರ್ತರನ್ನು ಗಡಿಪಾರಿಗೆ ನೋಟಿಸ್ ನೀಡಿದ ಕುರಿತಾಗಿ ಇಂದು ಸರಕಾರದ ನೀತಿಗೆ ಖಂಡಿಸಿದರು. ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಿ ಹೆಚ್ ಪಿ ಮುಖಂಡರಾದ ಸೋಮಶೇಖರ ಪೈಕ ಮಾತನಾಡಿ ಇಂತಹ ಒಂದೊಂದು ಕ್ರಮ ಕೈ ಗೊಂಡರೆ ಮುದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸುತ್ತೆವೆ ಎಂದು ಹೇಳಿದರು. ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ ಮಾತನಾಡಿ ನಮ್ಮ ಹಿಂದು ಸಂಘಟನೆಯ ಕಾರ್ಯಕರ್ತರ ಮೇಲೆ ಇಂತಹ ಹಲವು ಪ್ರಕರಣಗಳು ಹಾಕಿದ್ದಾರೆ ಮತ್ತು ಅಲ್ಲದೇ ಇಂತಹವುಗಳನ್ನು ನಾವು ಹಲವಾರು ಕಂಡಿದ್ದೆವೆ ಅಲ್ಲದೇ ಪೋಲಿಸ್ ಇನ್ಪೆಕ್ಟರ್ ರ ಬಗ್ಗೆ ನಮಗೆ ಒಳ್ಳೆಯ ಅಭಿಪ್ರಾಯ ಇತ್ತು ಆದರೆ ಅವರು ಈ ರೀತಿಯಲ್ಲಿ ರಾಜಕೀಯ ನಾಯಕರ ಒತ್ತಡಕ್ಕೆ ಮಣಿದು ಇಂತಹ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಪೋಲಿಸ್ ಇಲಾಖೆಯನ್ನು ಪ್ರಶ್ನಿಸಿದರು ಅಲ್ಲದೇ ಮುಂದಿನ ದಿನಗಳಲ್ಲಿ ಹೋರಾಟವನ್ನು ನಡೆಸುತ್ತೆವೆ ಎಂದು ಹೇಳಿದರು. ಬಿಜೆಪಿ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ ಮಾತನಾಡಿ ನಾವು ಇಂತಹ ಒಂದು ನೋಟಿಸ್ ಗಳಿಗೆ ಬಗ್ಗುವವರು ನಾವಲ್ಲಾ ಮತ್ತು ಮುಂದಿನ ದಿನಗಳಲ್ಲಿ ನೀವು ಈ ರೀತಿಯಲ್ಲಿ ಒಬ್ಬರಿಗೆ ನಿಡಿದರೆ ಮುಂದಿನ ದಿನಗಳಲ್ಲಿ ಎಲ್ಲರನ್ನು ಗಡಿಪಾರು ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಬರಬಹುದು ಎಂದು ಎಚ್ಚರಿಕೆಯನ್ನು ನೀಡಿದರು . ಅಲ್ಲದೇ ಸಮಾಜದ ಶಾಂತಿ ಮತ್ತು ರಕ್ಷಣೆ ಕೇವಲ ಪೋಲಿಸ್ ಇಲಾಖೆಯಿಂದ ಮಾತ್ರ ಸಾಧ್ಯವೇ ಇಲ್ಲಾ ಸಮಾಜದ ಜನರ ಸಹಕಾರವು ಅಗತ್ಯವಿದೆ ಅಲ್ಲವೇ ಹಾಗಾಗಿ ನಾವು ನಮ್ಮ ಗೋವು , ಹೆಣ್ಣು, ಭೂಮಿಯ ರಕ್ಣಣೆಗಾಗಿ ನಾವು ನಿಮ್ಮ ಜೊತೆಗೆ ನಿಂತಿದ್ದೆವೆ ಇಂತಹ ಸಂದರ್ಭಗಳಲ್ಲಿ ಈ ರೀತಿಯಲ್ಲಿ ಪರಿವಾರ ಸಂಘಟನೆಗಳ ಕಾರ್ಯಕರ್ತರ ಮೇಲೆ ಮಾಡುವುದು ಸರಿಯಲ್ಲ ಮುಂದಿನ ದಿನಗಳಲ್ಲಿ ನಾವೆಲ್ಲರು ಠಾಣೆಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತೆವೆ ಎಂದು ಹೇಳಿದರು ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಮಧುಸೂದನ್ , ನವೀನ್ ಎಲಿಮಲೆ , ಜಿತೇಶ್ ಉಬರಡ್ಕ , ಸನತ್ ಚೊಕ್ಕಾಡಿ , ಪ್ರಕಾಶ್ ಮತ್ತಿತರು ಉಪಸ್ಥಿತಿತರಿದ್ದರು.
- Tuesday
- November 26th, 2024