
ಸುಳ್ಯದಲ್ಲಿ ಹಿಂದು ಪರ ಸಂಘಟನೆಯಲ್ಲಿ ತನ್ನದೇ ಆದ ಛಾಪು ಮೂಡಿಸಿ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಸುಳ್ಯ ಮೀಸಲು ಕ್ಷೇತ್ರಕ್ಕೆ ಪ್ರಭಲ ಅಬ್ಯರ್ಥಿಯಾಗಿ ಯುವ ಜನತೆಯಲ್ಲಿ ಹೆಸರು ಪಡೆದು ಭಾರಿ ಪೈಪೋಟಿ ನೀಡಿ ನಾಯಕರ ಗಮನ ಸೆಳೆದಿದ್ದರು . ಇದೀಗ ಲತೀಶ್ ಗುಂಡ್ಯರು ಗುಂಪು ಕಟ್ಟಿಕೊಂಡು ಕಾನೂನು ಬಾಹಿರ ಚಟುವಟಿಕೆ ಮಾಡುತ್ತಿದ್ದಾರೆ ಅಲ್ಲದೇ ಗುಂಪು ಕಟ್ಟಿಕೊಂಡು ಕೋಮು ದ್ವೇಷವನ್ನು ಹರಡುತ್ತಿದ್ದಾರೆ ಎಂದು ಉಲ್ಲೆಖಿಸಿ ಬಳ್ಳಾರಿ ಜಿಲ್ಲೆಯ ತಕ್ಕಲ ಕೋಟೆಗೆ ಗಡಿಪಾರು ಯಾಕೆ ಮಾಡಬಾರದು ಎಂದು ಪ್ರಶ್ನಿಸಿ ಲತೀಶ್ ಗುಂಡ್ಯರಿಗೆ ನೋಟಿಸ್ ನೀಡುವುದಾಗಿ ತಿಳಿದು ಬಂದಿದೆ. ಅಲ್ಲದೇ ಇಂದು ಸಂಸದರಾದ ಕಟೀಲ್ ಸಹಿತ ಹಿಂದು ಪರ ಮತ್ತು ಬಿಜೆಪಿ ನಾಯಕರ ನಿಯೋಗ ಸಹಾಯಕ ಆಯುಕ್ತರನ್ನು ಭೇಟಿ ಮಾಡಲಿದೆ ಎಂದು ತಿಳಿದುಬಂದಿದೆ.