

ದ.ಕ ಲೋಕಸಭಾ ಕ್ಷೇತ್ರವು ಭಾರಿ ಜಿದ್ದಾ ಜಿದ್ದಿನ ಕುತೂಹಲ ಮೂಡಿಸುವ ಕ್ಷೇತ್ರವಾಗಿ ಮಾರ್ಪಾಡು ಹೊಂದುತ್ತಿದ್ದು ಪ್ರಸ್ತುತ ಮೂರು ಭಾರಿ ಸೋಲಿಲ್ಲದ ಸರದಾರರಾಗಿ ಹೊರಹೊಮ್ಮೆ ರಾಜ್ಯ ಬಿಜೆಪಿ ಘಟಕದ ಚುಕ್ಕಾಣಿ ಕೈಯಲ್ಲಿ ಹಿಡಿದು ನಿರ್ಗಮಿತ ಅಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ಒಂದೆಡೆಯಾದರೆ ಇತ್ತ ಪುತ್ತೂರು ವಿಧಾನ ಸಭಾ ಕ್ಷೇತ್ರವನ್ನು ಚುನಾವಣೆಯ ಸಂದರ್ಭದಲ್ಲಿ ನಿಗಿನಿಗಿ ಕೆಂಡವಾಗಿ ಮಾರ್ಪಾಡು ಮಾಡಿ ಇದೀಗ ಜಿಲ್ಲೆಯಾದ್ಯಂತ ಮಿಂಚಿನ ಸಂಚಾರ ನಡೆಸುತ್ತಿರುವ ಅರುಣ್ ಕುಮಾರ್ ಪುತ್ತಿಲ ಹಾಗೆಯೇ ಇತರ ಹಲವಾರು ನಾಯಕರ ಹೆಸರುಗಳು ಕೇಳಿ ಬರುತ್ತಿರುವಾಗ ಇತ್ತ ಸುಳ್ಯದ ಮಹಿಳೆ ಇದೀಗ ಎಲ್ಲೆಡೆ ಸುದ್ದಿಯಾಗುತ್ತಿದ್ದಾರೆ. ಇವರು ಅರಂತೋಡು ಕ್ಷೇತ್ರದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿದ್ದು ಅನೇಕ ಜನಪರವಾದ ಹೋರಾಟ ನಡೆಸಿ ಪಕ್ಷ ಬೇಧ ಮರೆತು ಬಡವರ ಪರವಾಗಿ ಹೋರಾಟದ ಮುಖೇನ ಅನೇಕ ಸಮಸ್ಯೆಗಳನ್ನು ಇತ್ಯರ್ಥ ಪಡಿಸಿದ್ದು ಸದ್ಯ ಇವರ ಕೆಲಸ ಕಾರ್ಯಗಳನ್ನು ಗಮನಿಸಿದ ರಾಜ್ಯ ಹಾಗೂ ಕೇಂದ್ರ ನಾಯಕರು ಕೆಪಿಸಿಸಿಯಲ್ಲಿ ಜವಾಬ್ದಾರಿಯನ್ನು ನೀಡಿದ್ದು ಮುಂದಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಿಳಾ ಪ್ರತಿನಿಧಿ ಕಾಂಗ್ರೆಸ್ ಆದ್ಯತೆ ನೀಡಿದಲ್ಲಿ ಸುಳ್ಯದ ಸರಸ್ವತಿ ಕಾಮತ್ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದ್ದು ಕಾರ್ಯಕರ್ತರು ಮತ್ತು ನಾಯಕರ ನಡುವೆ ಇದೀಗ ಬಿಸಿ ಬಿಸಿ ಚರ್ಚೆಗಳು ಪ್ರಾರಂಭವಾಗಿದೆ ಎಂದು ತಿಳಿದುಬಂದಿದೆ.