ಸುಳ್ಯ ಅಮರ ಸಂಘಟನಾ ಸಮಿತಿ ಆಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆ ಮತ್ತು ಅಮರಮುಡ್ನೂರು ಗ್ರಾಮ ಪಂಚೀಯತ್ ಸಹಕಾರದೊಂದಿಗೆ ಆಧಾರ್ ನೊಂದಾಣಿ ಮತ್ತು ತಿದ್ದುಪಡಿ ಶಿಬಿರ ನ. 11ರಂದು ಅಮರಮುಡ್ನೂರು ಪಂಚಾಯತ್ ಸಭಾಭವನ ಕುಕ್ಕುಜಡ್ಕದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮರ ಸಂಘಟನಾ ಸಮಿತಿ (ರಿ) ಸುಳ್ಯ ಇದರ ಅಧ್ಯಕ್ಷರಾದ ಪ್ರವೀಣ್ ಕುಲಾಲ್ ಇವರು ವಹಿಸಿದರು. ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಶಕರಾದ ಕು| ಭಾಗೀರಥಿ ಮುರುಳ್ಯ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಾನಕಿ ಕಂದಡ್ಕ, ಪಂಚಾಯತ್ ಉಪಧ್ಯಾಕ್ಷರಾದ ಭುವನೇಶ್ವರಿ , ಪಂಚಾಯತ್ ಸದಸ್ಯರುಗಳಾದ ವೆಂಕಟ್ರಮಣ ಇಟ್ಟಿಗುಂಡಿ , ರಾಧಕೃಷ್ಣ ಕೋರತ್ಯಡ್ಕ , ಕೃಷ್ಣಪ್ರಸಾದ್ ಮಾಡಬಾಕೀಲು ಜನಾರ್ಧನ ಪೈಲೂರು, ದಿವ್ಯ ಮಡಪ್ಪಾಡಿ , ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಕೇಶವ ಕರ್ಮಜೆ , ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾದ ಹರಿಶ್ಚಂದ್ರ ಗೌಡ ಮೋಂಟಡ್ಕ ,ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ನಿರ್ದೇಶಕರಾದ ಕೃಷ್ಣಪ್ಪ ಗೌಡ ಕೊಡ್ತುಗುಳಿ, ಅರಂತೋಡು ಆಧಾರ್ ಕೇಂದ್ರದ ನೀಶಾ , ನೆಟ್ಟಣ ಆಧಾರ್ ಕೇಂದ್ರದ ಶೃುತಿ ಇವರುಗಳು ಉಪಸ್ಥಿತರಿದ್ದರು. ನೂರ ಇಪ್ಪತ್ತಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಭಾಗವಹಿಸಿ ಪ್ರಯೋಜನ ಪಡೆದರು. ಅಮರ ಸಂಘಟನಾ ಸಮಿತಿ (ರಿ) ಸುಳ್ಯ ಇದರ ಸ್ಥಾಪಕಧ್ಯಕ್ಷ ಪ್ರದೀಪ್ ಬೊಳ್ಳೂರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಯಶಸ್ವಿಗೆ ಅಮರ ಸಂಘಟನಾ ಸಮಿತಿಯ ಎಲ್ಲ ಸದಸ್ಯರು ಸಹಕರಿಸಿದರು.
- Thursday
- November 21st, 2024