ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಪಡೆದ ಮಣಿಯಾನ ಪುರುಷೋತ್ತಮ ರಿಗೆ ಗುತ್ತಿಗಾರು ಪೈಕದ ಹನ್ನೆರಡು ಒಕ್ಕಲುಗಳಿಗೆ ಸಂಬಂಧಪಟ್ಟ ಹತ್ತು ಸಮಸ್ತರು ಮತ್ತು ಬೈಲಿನವರು ಸೇರಿ ಸನ್ಮಾನುಸಿದರು. ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ ಹಾಗೂ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಡಿ ಯಂ ರಾಮಣ್ಣಗೌಡ ಶಾಲು ಹಾರ ಹಾಕಿ ಫಲ ಪುಷ್ಪ ಮತ್ತು ಫಲಕ ನೀಡಿ ಅಭಿನಂದಿಸಿದರು. ಊರ ಗೌಡರಾದ ಜಗದೀಶ ಪೈಕ ಹಾಗೂ ಊರಿನ ಹಿರಿಯರಾದ ಮುಚ್ಚಾರ ಚಿನ್ನಪ್ಪ ಗೌಡರು ಶುಭ ಹಾರೈಸಿದರು
ಗೌರವ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು ತಾನು ಗುಮಾಸ್ತ ಹುದ್ದೆಯಿಂದ ಪಿಡಿಓ ಹುದ್ದೆಯವರೆಗೆ ಯಾವ ರೀತಿ ಕಷ್ಟಪಟ್ಟು ಇಷ್ಟಪಟ್ಟು ಕೆಲಸ ನಿರ್ವಹಿಸಿದ ಬಗ್ಗೆ ಮತ್ತು ತನಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ತಿಳಿಸಿದರು.
ಲೋಕೇಶ್ವರ ಡಿ. ಆರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಿ ಪೂರ್ಣ ಚಂದ್ರ ಬೊಮ್ಮದೇರೆ ವಂದಿಸಿದರು.