ಚೈತ್ರ ಯುವತಿ ಮಂಡಲ(ರಿ) ಅಜ್ಜಾವರ ಮತ್ತು ಪ್ರತಾಪ ಯುವಕ ಮಂಡಲ( ರಿ )ಅಜ್ಜಾವರ, ಶ್ರೀ ಮಹಮ್ಮಾಯಿ ದೇವಸ್ಥಾನ ಮಾವಿನಪಳ್ಳ, ಓಂ ಫ್ರಂಡ್ಸ್ ಅಜ್ಜಾವರ,ವಿಶ್ವಹಿಂದೂ ಪರಿಷತ್ ಶಿವಾಜಿ ಶಾಖೆ ಅಜ್ಜಾವರ, ಏಕದಂತ ಸಮಿತಿ ಮಾವಿನಪಳ್ಳ ಇದರ ಸoಯುಕ್ತ ಆಶ್ರಯದಲ್ಲಿ 3ನೇ ವರ್ಷದ ಗೋಪೂಜೆ ಕಾರ್ಯಕ್ರಮ ಮಾವಿನಪಳ್ಳದಲ್ಲಿ ನಡೆಯಿತು. ಚೈತ್ರ ಯುವತಿ ಮಂಡಲ ಅಜ್ಜಾವರದ ಸದಸ್ಯೆಯರು ಹಾಗೂ ಸಾರ್ವಜನಿಕರಿಂದ ಗೋವಿಗೆ ಪೂಜೆ ಸಲ್ಲಿಸಲಾಯಿತು.ಶ್ರೀ ಮಹಮ್ಮಾಯಿ ದೇವಸ್ಥಾನ ಮಾವಿನಪಳ್ಳ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ ಅವರು ದೀಪಾವಳಿ ಆಚರಣೆ ಮತ್ತು ಗೋಪೂಜೆ ಮಹತ್ವ ತಿಳಿಸಿದರು. ಯುವಜನಾ ಸoಯುಕ್ತ ಮಂಡಳಿ (ರಿ) ಸುಳ್ಯ ಇದರ ಉಪಾಧ್ಯಕ್ಷರಾದ ವಿಜಯಕುಮಾರ್ ಉಬರಡ್ಕ ರವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ವೇದಿಕೆಯಲ್ಲಿ ಶ್ರೀ ಮಹಮ್ಮಾಯಿ ದೇವಸ್ಥಾನ ಸಮಿತಿಯ ಆನಂದ,ಶ್ರೀಮತಿ ಜಯಲಕ್ಷ್ಮೀ ಸಂಜೀವರಾವ್, ಗಿರಿಧರ ನಾರಲು ಉಪಸ್ಥಿತರಿದ್ದರು.ಕುಮಾರಿ ಧರಿತ್ರಿಯವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಚೈತ್ರ ಯುವತಿ ಮಂಡಲದ ಅಧ್ಯಕ್ಷೆ ಶ್ರೀಮತಿ ಶಶ್ಮಿ ಭಟ್ ಅಜ್ಜಾವರ ಸ್ವಾಗತಿಸಿ ವಿನೋದ್ ಮಾವಿನಪಳ್ಳ ವಂದಿಸಿದರು. ಪ್ರತಾಪ ಯುವಕ ಮಂಡಲದ ಅಧ್ಯಕ್ಷರಾದ ಗುರುರಾಜ್ ಅಜ್ಜಾವರ ಕಾರ್ಯಕ್ರಮ ನಿರೂಪಿಸಿದರು.
- Tuesday
- December 3rd, 2024