- Thursday
- November 21st, 2024
ಆಲೆಟ್ಟಿ ಗ್ರಾಮ ಪಂಚಾಯತ್ ಗೆ ಇಂದು ಲೋಕಾಯುಕ್ತ ಅಧಿಕಾರಿಗಳು ಧಿಢೀರ್ ದಾಳಿ ನಡೆಸಿದ್ದು ಈ ಹಿಂದೆ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತಾಗಿ ದೂರುಗಳು ಸಲ್ಲಿಕೆಯಾಗಿದ್ದು ಇದರ ಬಗ್ಗೆ ಇದೀಗ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆನ್ನಲಾಗಿದೆ. ಈ ಹಿಂದೆ ಮಾಣಿಮರ್ಧು ಸೇತುವೆ ಕಾಮಗಾರಿಯಲ್ಲಿ ಅವ್ಯವಹಾರ ಮಾಡಿದ್ದಾರೆ ಎಂಬ ಸ್ಥಳೀಯರು ನೀಡಿದ ದೂರಿನ ಅನ್ವಯ ಲೋಕಾಯುಕ್ತ ದಾಳಿ ನಡೆಸಿದ್ದಾರೆ ಎಂದು...
ಅಹಾನ ಸಂಸ್ಥೆ ಬೆಂಗಳೂರು ಇವರು ರೈಟ್ ಟು ಲಿವ್ ಕೋಟೆ ಪೌಂಡೇಷನ್ ಮೂಲಕ ವಿದ್ಯಾ ಬೋಧಿನಿ ಹಿರಿಯ ಪ್ರಾಥಮಿಕ ಶಾಲೆಗೆ ಐದು ಲಕ್ಷ ರೂ ವೆಚ್ಚದಲ್ಲಿ 10 ಸುಸಜ್ಜಿತ ಟಾಯ್ಲೆಟ್ ಕೊಡುಗೆ ನೀಡಿದ್ದಾರೆ. ರೈಟ್ ಟು ಲಿವ್ ಕೋಟೆ ಪೌಂಡೇಷನ್ ಸಮನ್ವಯ ಅಧಿಕಾರಿ ಪ್ರದೀಪ್ ಉಬರಡ್ಕ ಉಪಸ್ಥಿತರಿದ್ದರು. ಶ್ರೀಮತಿ ಶಶಿಕಲಾ ಜಿ.ಕೆ., ವನಶ್ರಿ ಪೆರುವಾಜೆ ಉದ್ಘಾಟನಾ...
ಭಾರತೀಯರ ಆರಾಧ್ಯ ದೈವವಾಗಿರುವ ರಾಮಭಂಟ ಹನುಮಂತನ 'ವೀರ ಹನುಮಂತನೇ' ಎಂಬ ಭಕ್ತಿ ಗೀತೆಯೂ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ದಲ್ಲಿ ಬಿಡುಗಡೆಗೊಂಡಿತು. ಈ ಭಕ್ತಿಗೀತೆಯನ್ನು ಕುಮಾರಸ್ವಾಮಿ ವಿದ್ಯಾಲಯದ ವಾರ್ಷಿಕೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಚಂದ್ರಶೇಖರ್ ತಳೂರು ರವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಭವ್ಯ ಜೇನ್ಕೋಡಿ, ಚಂದ್ರಶೇಖರ್ ತಳೂರು ಹಾಗೂ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಗಣೇಶ್ ಪ್ರಸಾದ್ ನಾಯರ್, ಸಂಚಾಲಕರು...
ನವೆಂಬರ್ 10 ರಂದು ಬೆಳ್ಳಾರೆಯ ಹಿದಾಯ ಪಬ್ಲಿಕ್ ಸ್ಕೂಲ್ ವಿದ್ಯಾ ಸಂಸ್ಥೆಯಲ್ಲಿ ಬಾಲ್ಯ ವಿವಾಹ ಮುಕ್ತ ಕರ್ನಾಟಕ ಅಭಿಯಾನದ ಅಂಗವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಕಾರ್ಯಕ್ರಮ ನಡೆಸಲಾಯಿತು. ಬಾಲ್ಯ ವಿವಾಹ ಆಚರಣೆಯಿಂದ ಆಗುವ ಶಿಕ್ಷೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ 2006 ಮತ್ತು ಇದರ ದುಷ್ಪರಿಣಾಮಗಳ ಬಗ್ಗೆ ಶಿಕ್ಷಕಿ ಮಿಸ್ರಿಯಾ ರವರು ಸವಿಸ್ತಾರವಾಗಿ ವಿವರಿಸಿದರು. ಸಭಾಧ್ಯಕ್ಷತೆಯನ್ನು...
ಸುಳ್ಯ ತಾಲೂಕಿನ ಹರಿಹರ ಗ್ರಾಮದ ಕಲ್ಲೇಮಠ ಎಂಬಲ್ಲಿ ಕೇರಳ ನೋಂದಾವಣಿಯ ದ್ವಿಚಕ್ರ ವಾಹನದಲ್ಲಿ ಮೂವರು ಶಂಕಿತರು ತಲವಾರು ಹಿಡಿದುಕೊಂಡು ಓಡಿ ಹೋಗಿದ್ದರು ಎಂಬ ಮಾಹಿತಿಯನ್ನು ಸ್ಥಳೀಯರೊಬ್ಬರು ಸುಬ್ರಹ್ಮಣ್ಯ ಪೋಲಿಸ್ ಠಾಣೆಗೆ ತಿಳಿಸಿದರು.ವಿಚಾರ ತಿಳಿದ ತಕ್ಷಣ ಸುಬ್ರಹ್ಮಣ್ಯ ಠಾಣಾಧಿಕಾರಿಯಾದ ಕಾರ್ತಿಕ್ ಅವರು ಘಟನಾ ಸ್ಥಳಕ್ಕೆ ಬಂದು ಓಡಿಹೋದ ವ್ಯಕ್ತಿಯನ್ನು ಸಾರ್ವಜನಿಕರ ಸಹಾಯದಿಂದ ಪತ್ತೆ ಹಚ್ಚಿ ವಿಚಾರಣೆ ನಡೆಸಿದರು....