- Tuesday
- December 3rd, 2024
ಬಾಳಿಲ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತೀ ವರ್ಷ ವಿಭಿನ್ನ ರೀತಿಯ ಶೈಕ್ಷಣಿಕ ಚಟುವಟಿಕೆ ಕೈಗೊಂಡು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಮನಸೆಳೆಯುತ್ತದೆ. ಈ ಬಾರಿ ಶಾಲೆಯ ಅಂಗಳದಲ್ಲೆ ಗದ್ದೆ ನಿರ್ಮಾಣ ಮಾಡಿ ಮಕ್ಕಳಿಗೆ ಭತ್ತದ ಬೇಸಾಯದ ಅರಿವು ಮೂಡಿಸಿದೆ. ಜೂನ್ ತಿಂಗಳಲ್ಲಿ ನೆಟ್ಟ ನೇಜಿ ಕಟಾವಿಗೆ ಬಂದಿದ್ದು, ಇಂದು ಕೊಯ್ಲು ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ...
ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ನಗರ ಇದರ ವತಿಯಿಂದ ನ. 18 ರಂದು ನಡೆಯುವ ಗೋಪೂಜೆ ಕಾರ್ಯಕ್ರಮದ ಕರಪತ್ರ ಬಿಡುಗಡೆಯು ಶ್ರೀ ಚೆನ್ನಕೇಶವ ದೇವಸ್ಥಾನ ಸುಳ್ಯದಲ್ಲಿ ನಡೆಯಿತು. ವಿಶ್ವ ಹಿಂದೂ ಪರಿಷದ್ ಬಜರಂಗದಳ ನಗರದ ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದರು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದಿದ್ದ ವ್ಯಕ್ತಿಯೋರ್ವರು ಹೃದಯಾಘಾತದಿಂದ ಮೃತಪಟ್ಟ ಘಟನೆ ನ. 8ರಂದು ಸುಬ್ರಹ್ಮಣ್ಯದಲ್ಲಿ ಸಂಭವಿಸಿದೆ.ಬೆಂಗಳೂರಿನ ಕೆಂಗೇರಿಯ 55 ವರ್ಷದ ವ್ಯಕ್ತಿ ಮೃತಪಟ್ಟವರು. ಬೆಂಗಳೂರಿನಿಂದ ಬಂದಿದ್ದ ಕುಟುಂಬ ಸದಸ್ಯರು ನ.8ರಂದು ಕೊನೆಯ ದಿನದ ಸರ್ಪ ಸಂಸ್ಕಾರ ಪೂಜೆಯಾಗಿ ವಸತಿ ಗೃಹದಲ್ಲಿದ್ದ ಸಂದರ್ಭ ಅವರಿಗೆ ಹೃದಯಾಘಾತವಾಗಿತ್ತು.
ಮದುವೆಗದ್ದೆಯ ನಿವಾಸಿಯಾಗಿರುವ ಐಶ್ವರ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪತಿ ಮನೆಯವರ ಮತ್ತು ಕುಟುಂಬಸ್ಥರ ಕಿರುಕುಳಕ್ಕೆ ಬೇಸತ್ತು ಆಕೆಯ ಡೆತ್ ನೋಟ್ ಮತ್ತು ತಾಯಿಯ ದೂರಿನ ಮೇರೆಗೆ ಕೇಸು ದಾಖಲಾಗಿದ್ದ ಹತ್ತು ಆರೋಪಿಗಳ ಪೈಕಿ ಮೂವರಿಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದೆ. ಹತ್ತು ಆರೋಪಿಗಳ ಪೈಕಿ ಐಶ್ವರ್ಯ , ಪತಿ ರಾಜೇಶ್, ಮಾವ ಗಿರಿಯಪ್ಪ ಕಾಪಿಲ, ಅತ್ತೆ ಸೀತಾ,...
ಅಮರ ಸುಳ್ಯ ಸುದ್ದಿ ಬಳಗ ಸತತ 7 ನೇ ಬಾರಿಗೆ ಹೊರತಂದ ದೀಪಾವಳಿ ವಿಶೇಷಾಂಕ 2023 ರ ಬಿಡುಗಡೆ ಕಾರ್ಯಕ್ರಮ ಇಂದು ನಡೆಯಿತು. ಸ್ವರ್ಣಶ್ರೀ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶ್ವಥ್ ಬಿಳಿಮಲೆ ಸಂಚಿಕೆ ಬಿಡುಗಡೆಗೊಳಿಸಿ ಶುಭಹಾರೈಸಿದರು. ಹಿರಿಯ ವರದಿಗಾರ ಪದ್ಮನಾಭ ಅರಂಬೂರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಧಾನ ಸಂಪಾದಕ ಮುರಳೀಧರ ಅಡ್ಡನಪಾರೆ ಕೃತಜ್ಞತೆ ಸಲ್ಲಿಸಿದರು....