
ಸುಳ್ಯ ಪೇರಾಲು ನಿವಾಸಿ ಪೆರಾಲು ಅಂಚೆ ಕಛೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವಕ ಮಹೇಶ್ ಎಂಬಾತ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ಪೇರಾಲು ಎಂಬಲ್ಲಿ ಅಂಚೆ ಕಛೇರಿಯಲ್ಲಿ ಗುತ್ತಿಗೆ ನೆಲೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ಆತನು ಗ್ರಾಮ ಪಂಚಾಯತ್ ಗೆ ಸಂಭದ ಪಟ್ಟ ನೀರಿನ ಟ್ಯಾಂಕ್ ಬಳಿಯ ಗುಡ್ಡದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಈ ಪ್ರಕಣವು ಸ್ಥಳೀಯರು ಗಮನಿಸಿ ವಿಚಾರ ತಿಳಿದು ಇದೀಗ ಸ್ಥಳಕ್ಕೆ ಪೋಲೀಸರು ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ.