Ad Widget

ಸುಳ್ಯ : ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ನೂತನ ಪ್ರಾoಶುಪಾಲರಾಗಿ ಮಿಥಾಲಿ ಪಿ ರೈ

ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ನೂತನ ಪ್ರಾಚಾರ್ಯರಾಗಿ ಮಿಥಾಲಿ ಪಿ ರೈ ನೇಮಕಗೊಂಡಿದ್ದಾರೆ.

. . . . .

ಮೂಲತ ಪುತ್ತೂರಿನವರಾದ ಇವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಯುನೈಟೆಡ್ ಅಕಾಡೆಮಿ ಹಾಸನದಲ್ಲಿ ಪಡೆದು , ಪಿಯು ಮತ್ತು ಪದವಿ ಶಿಕ್ಷಣವನ್ನು ಎಸ್ ಡಿ ಎಂ ಕಾಲೇಜು ಉಜಿರೆ ಇಲ್ಲಿ ಪೂರೈಸಿ, ಇಂಗ್ಲೀಷ್ ಸ್ನಾತಕೋತ್ತರ ಪದವಿಯನ್ನು ಮಂಗಳೂರು ವಿಶ್ವ ವಿದ್ಯಾನಿಲಯ ಕೊಣಾಜೆಯಲ್ಲಿ ಪೂರೈಸಿದರು.2002ರಲ್ಲಿ ವಿದ್ಯಾರಶ್ಮಿ ಪ.ಪೂ ಕಾಲೇಜು ಸವಣೂರು ಇಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿಯಾಗಿ ಕರ್ತವ್ಯಕ್ಕೆ ಸೇರಿ 2006-07ರ ತನಕ ಅದೇ ಕಾಲೇಜಿನಲ್ಲಿ ಪ್ರಾoಶುಪಾಲರಾಗಿ ಕರ್ತವ್ಯ ನಿರ್ವಹಿಸಿ, ಬಳಿಕ ಅದೇ ಕಾಲೇಜಿನ ಪದವಿ ವಿಭಾಗದಲ್ಲಿ 2012-17ರ ತನಕ ಪ್ರಾoಶುಪಾಲರಾಗಿ ಕರ್ತವ್ಯ ನಿರ್ವಹಿಸಿದರು.ಕನ್ನಡದ ಖ್ಯಾತ ಕವಿ ಕಯ್ಯಾರ  ಕಿoಞಣ್ಣ ರೈ ಅವರ ಕವನ ಸಂಕಲನವನ್ನು ಇಂಗ್ಲೀಷ್ ಗೆ ‘ಸ್ಪ್ರಿಂಗ್ಸ್ ‘ಎಂಬ ಹೆಸರಿನಲ್ಲಿ   ಅನುವಾದಿಸಿದ್ದಾರೆ. ಮೂಡಂಬೈಲು ರವಿ ಶೆಟ್ಟಿ ಅವರ ಜೀವನ ಚರಿತ್ರೆ ‘ರವಿ ತೇಜ ‘ಪುಸ್ತಕವನ್ನು ಇಂಗ್ಲೀಷ್ ಗೆ ಅನುವಾದಿಸಿದ್ದಾರೆ. ಇದು ಮುಂಬೈ ವಿಶ್ವ ವಿದ್ಯಾನಿಲಯದಲ್ಲಿ ಪ್ರಕಟಗೊಂಡಿದೆ .ಇತಿಹಾಸ ತಜ್ಞ ಡಿ ಎನ್ ಕೃಷ್ಣಯ್ಯ ಅವರು ಬರೆದ ಕೊಡಗು ಇತಿಹಾಸ ಪುಸ್ತಕವನ್ನು ಇಂಗ್ಲೀಷ್ ಗೆ ಅನುವಾದಿಸಿದ್ದಾರೆ.

ನೂತನ ಪ್ರಾoಶುಪಾಲರನ್ನು ಆಡಳಿತ ಮಂಡಳಿ,ಸಂಸ್ಥೆಯ ಶೈಕ್ಷಣಿಕ ಸಲಹೆಗಾರರು,ಎನ್ನೆoಸಿಯ ವಿಶ್ರಾಂತ ಪ್ರಾಚಾರ್ಯರಾದ ಪ್ರೊ ಎಂ ಬಾಲಚಂದ್ರ ಗೌಡ ಅವರು ಅಭಿನಂದಿಸಿದರು.ಈ ಸಂದರ್ಭದಲ್ಲಿ ಪದವಿ ವಿಭಾಗದ ಪ್ರಾಚಾರ್ಯರಾದ ಪ್ರೊ. ರುದ್ರ ಕುಮಾರ್ ಎಂ ಎಂ,ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಹೆಚ್. ಆರ್.ವಿಭಾಗದ ಮುಖ್ಯಸ್ಥರಾಗಿರುವ ಶಿವಪ್ರಸಾದ್ ಪಿ ,ಸಂಸ್ಥೆಯ ಪ್ರಭಾರ ಪ್ರಾಚಾರ್ಯರಾದ ಸಾವಿತ್ರಿ ಕೆ ಹಾಗೂ ಸಂಸ್ಥೆಯ ಬೋಧಕ -ಬೋಧಕೇತರ ವೃಂದದವರು ಉಪಸ್ಥಿತರಿದ್ದರು

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!