ಸುಳ್ಯ ಹಾಗೂ ಪುತ್ತೂರು ತಾಲೂಕಿನ ಕೆ ಎಫ್ ಡಿ ಸಿ ನಿಗಮದಲ್ಲಿ ಸಾವಿರಾರು ಕಾರ್ಮಿಕರು ಜೀವನ ನಡೆಸುತ್ತಿದ್ದಾರೆ. ತಮಿಳು ಕಾರ್ಮಿಕರು ದೀಪಾವಳಿ ಹಬ್ಬವನ್ನು ವಿಶೇಷ ವಾಗಿ ಆಚರಣೆ ಮಾಡುತ್ತಾರೆ. ಈ ಬಾರಿಯ ದೀಪಾವಳಿ ಆಚರಣೆಗೆ ನಿಗಮದಿಂದ ಸರಿಯಾದ ಸಮಯಕ್ಕೆ ಕಾರ್ಮಿಕರಿಗೆ ಬೋನಸ್ ಸಂಬಳ ನೀಡದೆ ಹಬ್ಬ ಆಚರಣೆಗೆ ಅಧಿಕಾರಿಗಳು ತಣ್ಣೀರು ಎರಚಿದ್ದಾರೆ. ಕಾರ್ಮಿಕರು, ಮಕ್ಕಳಿಗೆ ಹೊಸ ಬಟ್ಟೆ ಖರೀದಿಸಿ ಹೊಲಿಸಲು ಸಮಯ ಇಲ್ಲದಾಗಿದೆ, ಹಬ್ಬಕ್ಕೆ ಬೇಕಾದ ಸಾಮಾನು ಖರೀದಿಸಲು ದುಡಿದ ಹಣ ಕೈ ಗೆ ಸಿಗದೆ ಆಕಾಶ ನೋಡುವ ಪರಿಸ್ಥಿತಿ ಉಂಟಾಗಿದೆ. ಈ ಪರಿಸ್ಥಿತಿಗೆ ನಿಗಮದ ಅಥಿಕಾರಿಗಳೇ ನೇರ ಹೊಣೆ ಯಾಗಿದ್ದು, 24 ಗಂಟೆಯೊಳಗೆ ಕಾಮಿ೯ಕರಿಗೆ ಬೋನಸ್ ನೀಡಬೇಕೆಂದು ಕನಾ೯ಟಕ ತಮಿಳು ಸಂಘ ಈ ಮೂಲಕ ಒತ್ತಾಯ ಮಾಡಿದೆ.
- Friday
- April 4th, 2025