
ಲಯನ್ಸ್ ಕ್ಲಬ್ ಪಂಜ ಇದರ ವತಿಯಿಂದ ಪೀಸ್ ಪೋಸ್ಟರ್ ಗೆ ಆಯ್ಕೆ ಮಾಡಲು ಸ್ಥಳೀಯ ಶಾಲೆಗಳ 25 ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಶಾರದಾoಬ ಭಜನಾ ಮಂದಿರ ಪಂಜ ,ಇಲ್ಲಿ ನಡೆಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆ ಯನ್ನ ಲಯನ್ಸ್ ಕ್ಲಬ್ ಪಂಜ ಇದರ ಅಧ್ಯಕ್ಷ ದಿಲೀಪ್ ಬಾಬ್ಲು ಬೆಟ್ಟು ವಹಿಸಿದ್ದರು .ಮುಖ್ಯ ಅತಿಥಿಯಾಗಿ ವೇದಿಕೆಯಲ್ಲಿ ಚಿತ್ರ ಕಲಾ ಶಿಕ್ಷಕ ಸತೀಶ್ ಪಂಜ ಉಪಸ್ಥಿತರಿದ್ದರು. ಜಿಲ್ಲಾ ಸಂಪುಟದ ಸoಯೋಜಕರಾದ ಲ. ಶಶಿಧರ ಪಳಂಗಾಯ ಬಹುಮಾನ ವಿತರಿಸಿದರು. ಕಾರ್ಯದರ್ಶಿ ಲ.ವಾಸುದೇವ ಮೇಲ್ಪಾಡಿ ವಂದಿಸಿ ದರು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ನ ಸದಸ್ಯರು, ಮಕ್ಕಳ ಪೋಷಕರು ,ಉಪಸ್ಥಿತರಿದ್ದರು.
